– ಮಹಾಮಾರಿಗೆ 80 ಬಲಿ, ಸಿಲಿಕಾನ್ ಸಿಟಿಯಲ್ಲಿ 43 ಜನ ಸಾವು
– ಬೆಂಗಳೂರಲ್ಲಿ 11,404, ಮೈಸೂರು 811, ತುಮಕೂರು 507
ಬೆಂಗಳೂರು: ಮಹಾಮಾರಿ ಕೊರೊನಾ ಮಿಂಚಿನ ವೇಗದಲ್ಲಿ ಹಬ್ಬುತ್ತಿದ್ದು, ರಾಜ್ಯದಲ್ಲಿ ಇಂದು ದಾಖಲೆಯ 17,489 ಜನರಿಗೆ ಕೊರೊನಾ ಸೋಂಕು ತಗುಲಿದೆ. ಮಹಾಮಾರಿಗೆ ಬರೋಬ್ಬರಿ 80 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿಯೇ 11,404 ಪ್ರಕರಣಗಳು ಪತ್ತೆಯಾಗಿವೆ.
Advertisement
ನಿನ್ನೆ 14,859 ಮಂದಿಗೆ ಸೋಂಕು ತಗುಲಿತ್ತು. ನಿನ್ನೆಗಿಂತ ಇಂದು 2,630 ಪ್ರಕರಣಗಳು ಹೆಚ್ಚು ಪತ್ತೆಯಾಗಿದ್ದು, ಒಂದೇ ದಿನ ಎರಡೂವರೆ ಸಾವಿರ ಪ್ರಕರಣಗಳು ಹೆಚ್ಚಳವಾಗಿರುವುದು ತೀವ್ರ ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,19,160ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,41,998ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಇಂದು 5,565 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 10,09,549 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Advertisement
Advertisement
ಈ ವರೆಗೆ ಒಟ್ಟು 13,270 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 589 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 13,099 ಆಂಟಿಜನ್ ಟೆಸ್ಟ್, 1,30,209 ಆರ್ ಟಿಪಿಸಿಆರ್ ಸೇರಿದಂತೆ ಒಟ್ಟು 1,43,308 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 1,18,728 ಮಂದಿಗೆ ಲಸಿಕೆ ನೀಡಲಾಗಿದೆ.
Advertisement
ಇಂದಿನ 17/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/BaQAbyaPFi @mla_sudhakar @DVSadanandGowda @ShobhaBJP @PCMohanMP @Tejasvi_Surya @CTRavi_BJP @kiranshaw @WFRising @citizenkamran @RCBTweets @NammaKarnataka_ pic.twitter.com/DHWXsOiWrr
— K’taka Health Dept (@DHFWKA) April 17, 2021
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 50, ಬಳ್ಳಾರಿ 355, ಬೆಳಗಾವಿ 188, ಬೆಂಗಳೂರು ಗ್ರಾಮಾಂತರ 262, ಬೆಂಗಳೂರು ನಗರ 11,404, ಬೀದರ್ 359, ಚಾಮರಾಜನಗರ 136, ಚಿಕ್ಕಬಳ್ಳಾಪುರ 179, ಚಿಕ್ಕಮಗಳೂರು 68, ಚಿತ್ರದುರ್ಗ 80, ದಕ್ಷಿಣ ಕನ್ನಡ 309, ದಾವಣಗೆರೆ 122, ಧಾರವಾಡ 272, ಗದಗ 37, ಹಾಸನ 224, ಹಾವೇರಿ 48, ಕಲಬುರಗಿ 560, ಕೊಡಗು 58, ಕೋಲಾರ 144, ಕೊಪ್ಪಳ 121, ಮಂಡ್ಯ 223, ಮೈಸೂರು 811, ರಾಯಚೂರು 91, ರಾಮನಗರ 102, ಶಿವಮೊಗ್ಗ 125, ತುಮಕೂರು 507, ಉಡುಪಿ 118, ಉತ್ತರ ಕನ್ನಡ 102, ವಿಜಯಪುರ 281 ಹಾಗೂ ಯಾದಗಿರಿಯಲ್ಲಿ 153 ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು ನಗರ 124, ಕಲಬುರಗಿ 109, ಕೋಲಾರ 45, ಮೈಸೂರು 40, ಧಾರವಾಡ 29, ಬೀದರ್ 24, ದಾವಣಗೆರೆ ಹಾಗೂ ಹಾಸನ 23, ತುಮಕೂರಿನಲ್ಲಿ 22 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.