-ವರನ ಮೆರವಣಿಗೆಯಲ್ಲಿ ಕುಟುಂಬಸ್ಥರ ಬಿಂದಾಸ್ ಡ್ಯಾನ್ಸ್
ಭುವನೇಶ್ವರ: ಮದುವೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡದಕ್ಕೆ ಅಧಿಕಾರಿಗಳು ವರನಿಗೆ 50 ಸಾವಿರ ರೂ. ದಂಡ ವಿಧಿಸಿದ್ದಾರೆ. ಓಡಿಶಾದ ಗಂಜಾಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಓಡಿಶಾದ ಗಂಜಾಮಾ ಜಿಲ್ಲೆಯ ಕೊರೊನಾ ಹಾಟ್ಸ್ಪಾಟ್ ಆಗಿದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ ಎಂದು ಸೂಚಿಸಿದೆ. ಆದ್ರೆ ಗಂಜಾಮಾದ ಮದುವೆಯಲ್ಲಿ ತೆರೆದ ಕಾರಿನಲ್ಲಿ ವರನ ಮೆರವಣಿಗೆ ಮಾಡಲಾಗಿದೆ. ಇನ್ನು ಕುಟುಂಬಸ್ಥರು ಮಾಸ್ಕ್ ಹಾಕದೇ ಹೆಜ್ಜೆ ಹಾಕಿದ್ದಾರೆ.
Advertisement
Groom along with four other family members arrested in #Odisha for Violating #COVIDー19 Guidelines during wedding Procession. pic.twitter.com/xK6HEnfexN
— Kapil Bhargava (@KpBhargava) July 4, 2020
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ನಿಮ್ಮ ಖುಷಿಗಾಗಿ ಬೇರೆಯವರ ಜೀವಕ್ಕೆ ಕುತ್ತು ತರುವಂತಹ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ವರನ ಮೆರವಣಿಗೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Advertisement