ಧಾರವಾಡ: ಮಾವನ ಅಪಹರಣದಲ್ಲಿ ಅಳಿಯನೇ ಭಾಗಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಅಳಿಯ ಪವನ ಜೊತೆ ಆಸೀಫ್, ಸಮೀರ್, ಮಂಜುನಾಥ್, ಖಲೀಲ ಬಂಧಿತ ಆರೋಪಿಗಳಾಗಿದ್ದಾರೆ. ಶ್ರೀನಿವಾಸ್ ನಾಯ್ಡು ಎಂಬ ರಿಯಲ್ ಎಸ್ಟೇಲ್ ಉದ್ಯಮಿಯನ್ನು ಅಳಿಯನ ಪವನ್ ಅಪಹರಣ ಮಾಡಿಸಿದ್ದನು.
Advertisement
Advertisement
ನಿನ್ನೆ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣದ ಪ್ರಮುಖ ಪಾತ್ರಧಾರಿ ಅಳಿಯನೇ ಇರುವುದು ತನಿಖೆಯಿಂದ ಹೊರ ಬಿದ್ದಿದೆ. ಈ ಪ್ರಕರಣ ಭಾರೀ ಟ್ವಿಸ್ಟ್ ಪಡೆದಿದ್ದು, ಉದ್ಯಮಿಯ ಅಳಿಯನಿಂದಲೇ ಮಾವನ ಕಿಡ್ನಾಪ್ ಪ್ಲ್ಯಾನ್ ನಡೆದಿತ್ತು ಎಂದು ತಿಳಿದು ಬಂದಿದೆ.
Advertisement
Advertisement
ಶ್ರೀನಿವಾಸ ನಾಯ್ಡು ಎಂಬ ರಿಯಲ್ ಎಸ್ಟೇಲ್ ಉದ್ಯಮಿಗೆ ನಿನ್ನೆ ಧಾರವಾಡದ ಇಟಿಗಟ್ಟಿ ಗ್ರಾಮದ ಬಳಿ ನಾಲ್ಕು ಜನ ಅಪಹರಿಸಿ ಪರಾರಿಯಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಶ್ರೀನಿವಾಸ ಅಳಿಯ ಪವನ ವಾಜಪೇಯಿಗೆ ಕೂಡಾ ಅಪಹರಣಕಾರರು ಹೊಡೆದು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಪೊಲೀಸರು ಶ್ರೀನಿವಾಸಗೆ ನಿನ್ನೆ ನಾಲ್ಕು ಗಂಟೆಯಲ್ಲೇ ಅಪಹರಣಕಾರಿಂದ ಬಿಡಿಸಿ ಕರೆ ಕರೆತಂದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಸೂಚನೆಯಿದೆ: ವಾಟಾಳ್ ನಾಗರಾಜ್
ನಂತರ ತನಿಖೆ ಮುಂದುವರಿಸಿದ್ದ ಧಾರವಾಡ ವಿದ್ಯಾಗಿರಿ ಪೊಲೀಸರಿಗೆ ಅಳಿಯನೇ ಪ್ರಮುಖ ಸುತ್ರಧಾರ ಎಂದು ತಿಳಿದು ಬಂದಿದ್ದರಿಂದ, ಆತನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಬಾಯಿ ಬಿಟ್ಟ ಅಳಿಯ ಪವನ್, ಆತನ ಜೊತೆಯಲ್ಲಿ ಇದ್ದವರ ಹೆಸರು ಬಾಯಿ ಬಿಟ್ಟಿದ್ದ. ಸದ್ಯ ಪವನ ಜೊತೆಯಲ್ಲಿ ಅಪಹರಣ ಮಾಡಿದ್ದ ನಾಲ್ಕು ಯುವಕರಿಗೆ ಬಂಧಿಸಿದ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ಅಳಿಯ ಪವನ ಸೇರಿ ನಾಲ್ವರನ್ನು ಬಂಧಿಸಿದ ವಿದ್ಯಾಗಿರಿ ಪೊಲೀಸರು, ಜೈಲಿಗೆ ಕಳಿಸಿದ್ದಾರೆ. ಅಳಿಯ ಮತ್ತು ಮಾವನ ನಡುವೆ ಹಣದ ವ್ಯವಹಾರ ಇತ್ತು ಎಂದು ತಿಳಿದು ಬಂದಿದ್ದು, ಇದೇ ವಿಚಾರಕ್ಕೆ ಅಳಿಯ ಅಪಹರಣ ಮಾಡಿದ್ದಾನೆ.