ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಮಾವ ಗಂಗಪ್ಪ ಶಿಂತ್ರಿ ಹೃದಾಯಾಘಾತದಿಂದ ಸಾವನ್ನಪ್ಪಿದ ಹಿನ್ನೆಲೆ, ಬೆಳಗಾವಿ ಜಿಲ್ಲೆಯ ಸವದತ್ತಿಗೆ ಆಗಮಿಸಿ ಅಂತಿಮ ದರ್ಶನ ಪಡೆದರು. ಈ ವೇಳೆ ಅಲ್ಲಿದ್ದ ತಮ್ಮ ಮಗ ಹೇಮಂತ್ ಹಾಗೂ ಮಗಳನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು.
Advertisement
Advertisement
Advertisement
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಹಿಂಡಲಗಾ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಸಿಬಿಐ ನ್ಯಾಯಾಲಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಸವದತ್ತಿಗೆ ಆಗಮಿಸಿ ಮಾವನ ಅಂತಿಮ ದರ್ಶನ ಪಡೆದರು. ಈ ವೇಳೆ ತಮ್ಮ ಮಕ್ಕಳನ್ನು ಕಂಡು ಭಾವುಕರಾದ ವಿನಯ್ ಕುಲಕರ್ಣಿ ನಂತರ ಕುಟುಂಬಸ್ಥರಿಗೆ ಸಮಾಧಾನ ಹೇಳಿ ಮನೆಯಿಂದ ಹೊರಗೆ ಆಗಮಿಸಿದರು.
Advertisement
ವಿನಯ್ ಸವದತ್ತಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಬೆಂಬಲಿಗರು ಸ್ಥಳಕ್ಕೆ ಜಾಮಾಯಿಸಿದರು. ಅಪಾರ ಪ್ರಮಾಣದ ಬೆಂಬಲಿಗರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಮನೆಯಿಂದ ಹೊರಬರುತ್ತಲೇ ನೆರೆದಿದ್ದ ಅಭಿಮಾನಿಗಳಿಗೆ ವಿನಯ್ ಕುಲಕರ್ಣಿ ಕೈ ಮುಗಿದು ನಮಸ್ಕರಿಸಿದರು. ಮಾವನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಧಾರವಾಡ ಸಿಬಿಐ ನ್ಯಾಯಾಲಯ ಕೇವಲ ಮೂರು ಗಂಟೆ ಅವಕಾಶ ನೀಡಿತ್ತು. ಸಮಯದ ಅಭಾವ ಇದ್ದ ಕಾರಣ ಅಂತ್ಯಕ್ರಿಯೆ ಮುಗಿಯುವ ಮುನ್ನವೇ ಹಿಂಡಲಗಾ ಜೈಲಿಗೆ ಹಿಂದಿರುಗಿದರು. ವಿನಯ್ ಕುಲಕರ್ಣಿ ಅವರ ಮಾವ 2019 ರಲ್ಲಿ ಧಾರವಾಡದಲ್ಲಿ ನಡೆದ ಕಟ್ಟಡ ದುರಂತದ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆ ಹೊಂದಿದ್ದರು.