ಮೈಸೂರು: ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ಗೆ ಮಾನಸಗಂಗೋತ್ರಿ ಎಂದು ಹೆಸರಿಟ್ಟಿದ್ದಾರೆ. ಇದು ನಮಗೆ ಸದಾ ಸ್ಪೂರ್ತಿ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಪ್ರತಿಷ್ಠಿತ ಮೈಸೂರು ವಿವಿಯ 100 ನೇ ಘಟಿಕೋತ್ಸವ ನಡೆಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಘಟಿಕೋತ್ಸವ ಉದ್ದೇಶಿಸಿ ವರ್ಚುಯಲ್ ಭಾಷಣ ಮಾಡಿದರು.
Advertisement
ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಪದವಿ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು ತಿಳಿಸಿದರು. ಕನ್ನಡ ಸಾಹಿತ್ಯ ಸಂಸ್ಕೃತಿ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ನಮ್ಮೆಲ್ಲರಿಗೂ ಮಾದರಿಯಾಗಬೇಕು.ನಾಲ್ವಡಿ ಮತ್ತು ವಿಶ್ವೇಶ್ವರಯ್ಯರ ಕನಸಿನ ಫಲ ಮೈಸೂರು ವಿಶ್ವವಿದ್ಯಾನಿಲಯ ಎಂದರು.
Advertisement
Advertisement
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಶಿಕ್ಷಣವೇ ಜೀವನದ ಬೆಳಕು ಅಂದಿದ್ದಾರೆ. ಶಿಕ್ಷಣ ಪ್ರತೀ ವ್ಯಕ್ತಿಯ ಜೀವನದ ಮಹತ್ವಪೂರ್ಣ ಅಂಶ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ದೃಷ್ಟಿಯಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸಿದ್ದೇವೆ. ಇದು ದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ದಿಕ್ಸೂಚಿಯಾಗಲಿದೆ. ಶೈಕ್ಷಣಿಕ ಪ್ರಗತಿ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತೆ. ಮೈಸೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಮಾಡಲಿದೆ. ಇದೇ ರೀತಿಯಾಗಿ ದೇಶದ ಎಲ್ಲಾ ವಿವಿಗಳೂ ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
Advertisement
ದೇಶದ ಉನ್ನತ ಶಿಕ್ಷಣ ಪುರುಷ ಪ್ರಧಾನವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. ಆರು ವರ್ಷಗಳ ಹಿಂದೆ ಐಐಟಿಯಲ್ಲಿ ಶೇ.8 ರಷ್ಟು ವಿದ್ಯಾರ್ಥಿನಿಯರು ಇದ್ದರು. ಈಗ ಆ ಸಂಖ್ಯೆ ಶೇ.20ಕ್ಕೆ ಏರಿದೆ ಎಂದರು.
ನಾವೆಲ್ಲ ಕೋವಿಡ್ ಸಂಕಷ್ಟ ಮೀರಿ ಆತ್ಮನಿರ್ಭರ ಭಾರತ ನಿರ್ಮಾಣ ಮಾಡಬೇಕಿದೆ. ಈಗಾಗಲೇ ಹಲವಾರು ಸ್ಟಾರ್ಟಪ್ ಗಳು ಶುರುವಾಗಿವೆ. ವಿಮಾನಯಾನ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಮಹತ್ವದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ತೊಡಗಿಸಿಕೊಳ್ಳಬೇಕಿದೆ. ಸ್ಟಾಟರ್ಪ್ ಗಳು ವ್ಯಕ್ತಿಯ ಉನ್ನತಿಯ ಜೊತೆಗೆ ದೇಶವನ್ನು ಉನ್ನತಿಗೆ ತೆಗೆದು ಕೊಂಡು ಹೋಗುತ್ತದೆ ಎಂಬುದನ್ನು ಯುವ ಜನರು ಮನಗಾಣಬೇಕು ಎಂದು ಹೇಳಿದರು.
Addressing the Centenary Convocation of the University of Mysore. https://t.co/xDblOs4u6E
— Narendra Modi (@narendramodi) October 19, 2020