ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಬಿಜೆಪಿಗೆ ಆಹ್ವಾನಿಸಿದ್ದಾರೆ.
ಜಿಲ್ಲೆಯ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಮಾತಾಡಿದ ಅವರು, ಕೆಪಿಸಿಸಿ ಅಧಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಶೀತಲ ಸಮರ ಯಾವ ಮಟ್ಟಕ್ಕೆ ಬೇಕಾದರು ಹೋಗಬಹುದು. ಅದು ಸಿದ್ದರಾಮಯ್ಯ ಬಿಜೆಪಿ ಬರುವ ಬೆಳವಣಿಗೆ ಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ಕಾಂಗ್ರೆಸ್ಸಿಗೆ ತಿವಿದಿದ್ದಾರೆ.
Advertisement
Advertisement
ಸಿದ್ದರಾಮಯ್ಯನವರ ಕೈಯಲ್ಲಿ ಬಿಜೆಪಿ ಹೊಗಳಿಸಲು ಸಾಧ್ಯ ಅನ್ನೋದಾದರೆ, ಅವರು ಬಿಜೆಪಿ ಬಂದಾಗಷ್ಟೇ ಬಿಜೆಪಿ ಹೊಗಳೋದು. ಕಾಂಗ್ರೆಸ್ಸಿನಲ್ಲಿ ಇರುವಷ್ಟು ದಿನ ಅವರು ಬಿಜೆಪಿ ಹೊಗಳಿದರೆ ಅವರ ರಾಜಕೀಯ ಅಧಿಕಾರಕ್ಕೆ ಧಕ್ಕೆ ಬರುತ್ತೆ ಹಾಗಾಗಿ ಹೊಗಳಲ್ಲ. ಆ ಸತ್ಯ ಅವರಿಗೆ ಗೊತ್ತಿದೆ. ಬಿಜೆಪಿಗೆ ಬಂದ ದಿನ ಖಂಡಿತಾ ಹೋಗಳುತ್ತಾರೆ ಎಂದು ಸಿದ್ದರಾಮಯ್ಯರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ.
Advertisement
ಯಾರು ಯಾರೆಲ್ಲ ಬರಲಿಲ್ಲ ನೋಡಿ, ಮಾಧವ ರಾವ್ ಮಗ ಸಿಂಧ್ಯಾ ಬಿಜೆಪಿಗೆ ಬಂದ್ರು. ಎಸ್.ಎಂ.ಕೃಷ್ಣ ಬಂದ್ರು. ಯಾರು ನಮ್ಮನ್ನ ಬಹಳ ಟೀಕೆ ಮಾಡಿದ್ದರೋ ಅವರೆಲ್ಲಾ ನಮ್ಮ ಹಾದಿ ಹಿಡಿದಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ಕೂಡ ಏನು ಬರಲ್ಲ ಅಂತಿಲ್ಲ. ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ. ಬಂದರೂ ಆಶ್ಚರ್ಯವಲ್ಲ ಎಂದು ತಿಳಿಸಿದರು.
Advertisement
ಸಿದ್ದರಾಮಯ್ಯ ಹಾಗೂ ಡಿಕೆಶಿಯ ಶೀತಲ ಸಮರ ಯಾವ ಘಟ್ಟ ಬೇಕಾದ್ರು ಮುಟ್ಟಬಹುದು. ಈ ರಾಜ್ಯದಲ್ಲಿ ಕೆಲವೇ ಜನ ಜನನಾಯಕರು ಇದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ, ದೇವೇಗೌಡ. ಕೆಲವೇ ಜನ ಜನನಾಯಕರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ಹಾಗಾಗಿ ಜನನಾಯಕರು ಇರಬೇಕಾದ ಪಾರ್ಟಿ ಭಾರತೀಯ ಜನತಾ ಪಾರ್ಟಿ ಎಂದು ಸಿದ್ದರಾಮಯ್ಯರನ್ನ ಪರೋಕ್ಷವಾಗಿ ಬಿಜೆಪಿಗೆ ಬನ್ನಿ ಎಂದಿದ್ದಾರೆ.