ಸಾಮಾನ್ಯವಾಗಿ ಬ್ರೆಸ್ಲೆಟ್ ಸೆಟ್ಗಳು ಪ್ರತಿನಿತ್ಯ ಬಳಸುವ ವಸ್ತುವಾಗಿದೆ. ಸದ್ಯ ತೆಳುವಾಗಿ ವಿನ್ಯಾಸಗೊಳಿಸಿರುವ ಬ್ರೆಸ್ಲೆಟ್ಗಳು ಟ್ರೆಂಡಿಂಗ್ನಲ್ಲಿದೆ ಹಾಗೂ ಈ ಬ್ರೆಸ್ಲೆಟ್ಗಳು ನಿಮಗೆ ಬಹಳ ಕಂಫರ್ಟ್ ಫೀಲ್ ನೀಡುತ್ತದೆ. 2020ರಲ್ಲಿ ಕಡಗದಂತೆ ಹೊಳೆಯುವ ಬ್ರೆಸ್ಲೆಟ್ಗಳು ಸಖತ್ ಫೇಮಸ್ ಆಗಿತ್ತು. ಈ ತರಹದ ಬ್ರೆಸ್ಲೆಟ್ಗಳು ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಸ್ಟಡ್, ಶೇಲ್, ರತ್ನಗಳಂತೆ ಹಲವು ವಿಧವಾದ ಬ್ರೆಸ್ಲೆಟ್ಗಳಿದೆ. ನೀವು ಕೂಡ ನಿಮ್ಮ ಕೈಗಳಿಗೆ ಸೂಟ್ ಆಗುವಂತಹ ಬ್ರೆಸ್ಲೆಟ್ಗಳು ಯಾವುದು ಎಂದು ಹುಡುಕುತ್ತಿದ್ದರೆ ಈ ಕೆಳಗೆ ಬ್ರೆಸ್ಲೆಟ್ಗಳ ಕೆಲವು ಡಿಸೈನ್ಗಳ ಕುರಿತು ಮಾಹಿತಿಗಳನ್ನು ನೀಡಲಾಗಿದೆ.
Advertisement
ವೈಟ್ ಕಲರ್ ಬ್ರೆಸ್ಲೆಟ್ : ಇದರಲ್ಲಿ ವೈಟ್ ಹಾಗೂ ಗೋಲ್ಡ್ ಕಲರ್ ಮಣಿಗಳ 5 ಸೆಟ್ಗಳಿದೆ. ಈ ಬ್ರೆಸ್ಲೆಟ್ ಕೊಂಚ ಭಾರವಾಗಿದ್ದರೂ, ಇದರಲ್ಲಿರುವ ಮಣಿಗಳು ಹೆಚ್ಚು ಗಮನ ಸೆಳೆಯುತ್ತದೆ. ಅಲ್ಲದೇ ಈ ಬ್ರೆಸ್ಲೆಟ್ಗೆ ಮ್ಯಾಚ್ ಆಗುವಂತೆ ನಿಮ್ಮ ಕತ್ತಿಗೆ ಇದೇ ತರದ ತೇಳುವಾದ ಮಣಿಗಳ ಸರ ಧರಿಸಿದರೆ ಸಖತ್ ಆಗಿ ಕಾಣಿಸುತ್ತದೆ.
Advertisement
Advertisement
ಬೋಹೀಮಿಯನ್ ಬ್ರೆಸ್ಲೆಟ್: ಬೋಹೀಮಿಯನ್ ಬ್ರೆಸ್ಲೆಟ್ಗಳನ್ನು ಸ್ಟಡ್, ಸ್ಟೋನ್ ಹಾಗೂ ಮಣಿಗಳನ್ನು ಜೋಡಿಸಿ ತಯಾರಿಸಲಾಗಿದ್ದು, ಇದು ನಿಮ್ಮ ಕೈಗೆ ಮೆರಗು ಹಾಗೂ ಮತ್ತಷ್ಟು ಹೊಳಪು ನೀಡುತ್ತದೆ. ಪ್ರತಿ ನಿತ್ಯ ನೀವು ಕಾಣಿಸಿಕೊಳ್ಳುದಕ್ಕಿಂತ ಬೋಹೀಮಿಯನ್ ಬ್ರೆಸ್ಲೆಟ್ ಧರಿಸಿದಾಗ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತೀರಿ.
Advertisement
ಕಲರ್ ಫುಲ್ ಬ್ರೆಸ್ಲೆಟ್: ಈ ಬ್ರೆಸ್ಲೆಟ್ನಲ್ಲಿ ಹಸಿರು, ಕೆಂಪು ಮತ್ತು ಗೋಲ್ಡ್ ಕಲರ್ನ ಚಿಕ್ಕ ಮಣಿಗಳಿಂದ ವಿನ್ಯಾಸಗೊಳಿಸಲಾಗಿದ್ದು, ಇದು ನಿಮ್ಮ ಕೈಗಳಿಗೆ ಕ್ಲಾಸಿ ಲುಕ್ ನೀಡುತ್ತದೆ.
ಸಿಲ್ವರ್ ಬ್ರೆಸ್ಲೆಟ್: ಸಿಲ್ವರ್ ಬ್ರೆಸ್ಲೆಟ್ನನ್ನು ಸಾಮಾನ್ಯವಾಗಿ ಸ್ಟೈಲಿಶ್ ಆಗಿರುವಂತಹ ಹುಡುಗಿಯರು ಬಹಳ ಇಷ್ಟಪಡುತ್ತಾರೆ. ಕೇವಲ ಚಿಕ್ಕ ಪೀಸ್ ನಂತಿರುವ ಈ ಬ್ರೆಸ್ಲೆಟ್ ಎಲ್ಲರ ಮಧ್ಯೆ ಗಮನ ಸೆಳೆಯುತ್ತದೆ ಹಾಗೂ ಇದನ್ನು ಬಹಳ ಸೂಕ್ಷ್ಮವಾಗಿ ಉಪಯೋಗಿಸಬೇಕಾಗುತ್ತದೆ.
ಸ್ಟಾರ್ ಮೂನ್ ಬ್ರೆಸ್ಲೆಟ್: ಸ್ಟಾರ್ ಮೂನ್ ಬ್ರೆಸ್ಲಟ್ ನೋಡಲು ಅದ್ಭುತವಾಗಿದ್ದು, ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಈ ಬ್ರೆಸ್ಲೆಟ್ ಖಾಲಿಯಾಗಿದ್ದ ನಿಮ್ಮ ಕೈಗಳನ್ನು ಸುಂದವಾಗಿಸುವುದರ ಜೊತೆಗೆ ಸ್ಟೈಲಿಶ್ ಲುಕ್ ನೀಡುತ್ತದೆ.