ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಬಜೆಟ್ ಮಂಡಿಸುತ್ತಿರುವ ಸಿಎಂ ಯಡಿಯೂರಪ್ಪ ಮಹಿಳೆಯರಿಗೆ ಬಂಪರ್ ಯೋಜನೆಗಳನ್ನ ಪ್ರಕಟಿಸಿದ್ದಾರೆ.
– ಸಂಜೀವಿನಿ ಯೋಜನೆಯ ಅಡಿ ಮಹಿಳಾ ಸ್ವಸಹಾಯ ಸಂಘಗಳಿಗೆ 60 ಸಾವಿರ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ
– ಸಣ್ಣ ಸಣ್ಣ ಆಹಾರ ಪದಾರ್ಥಗಳ ಮಾರುಕಟ್ಟೆ ಸೌಲಭ್ಯ
– ಉದ್ಯೋಗಸ್ಥ ಮಹಿಳೆಯರ ಮಕ್ಕಳ ಪಾಲನೆಗೆ ಜಿಲ್ಲಾ ಮಟ್ಟದಲ್ಲಿ 2 ಶಿಶುಪಾಲನಾ ಕೇಂದ್ರ ಸ್ಥಾಪನೆ
– ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸಲು ಶೇ.4ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ
– ವನಿತಾ ಸಂಗಾತಿ – ಗಾರ್ಮೆಂಟ್ಸ್ ಕಾರ್ಮಿಕರಿಗೆ ಉಚಿತ ಬಸ್ ಪಾಸ್
Advertisement
Advertisement
– ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಿರ್ಭಯ ಸಹಾಯ ಕೇಂದ್ರ
– ಮಹಿಳಾ ಸುರಕ್ಷತೆಗೆ ಬೆಂಗಳೂರಿನ 7.500 ಸಿಸಿಟಿವಿ ಅಳವಡಿಕೆ,ಮಹಿಳಾ ಸುರಕ್ಷತೆಗೆ ಇ-ಬೀಟ್ ವ್ಯವಸ್ಥೆ
– ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಗೋದಾಮು-ಅಂಗಡಿ ನೀಡುವಲ್ಲಿ ಶೇ.10 ರಷ್ಟು ಮೀಸಲು
– ಮಹಿಳಾ ಸರ್ಕಾರಿ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆ 6 ತಿಂಗಳು ಜೊತೆಗೆ ಸೇವಾವಧಿಯಲ್ಲಿ 6 ತಿಂಗಳು ಮಕ್ಕಳ ಆರೈಕೆ ರಜೆ
– ಮಹಿಳಾ ಪರ ಚಿಂತನೆ ಜಾರಿಗೊಳಿಸಲು ಸಿಎಂ ಮೇಲ್ವಿಚಾರಣೆಯಲ್ಲಿ ಮಹಿಳಾ ಸಬಲೀಕರಣ ಅಭಿಯಾನ