ಬೆಂಗಳೂರು: ಕರ್ನಾಟಕದಲ್ಲಿ ಇಂದೂ ಕೊರೊನಾ ಮಹಾಸ್ಫೋಟಗೊಂಡಿದ್ದು ಬರೋಬ್ಬರಿ 29,438 ಮಂದಿಗೆ ಸೋಂಕು ಬಂದಿದೆ. 208 ಮಂದಿ ಮೃತಪಟ್ಟಿದ್ದು 9,058 ಮಂದಿ ಬಿಡುಗಡೆಯಾಗಿದ್ದಾರೆ.
Advertisement
ಬೆಂಗಳೂರು ನಗರದಲ್ಲೇ 17,342 ಮಂದಿಗೆ ಸೋಂಕು ಬಂದಿದ್ದರೆ 149 ಮಂದಿ ಮೃತಪಟ್ಟಿದ್ದಾರೆ. ತುಮಕೂರಿನಲ್ಲಿ 1,559, ಹಾಸನ 823, ಬಳ್ಳಾರಿ 731, ಮಂಡ್ಯ 688, ಬೆಂಗಳೂರು ಗ್ರಾಮಾಂತರ 684 ಮಂದಿಗೆ ಸೋಂಕು ಬಂದಿದೆ.
Advertisement
Advertisement
ರಾಜ್ಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13,04,397ಕ್ಕೆ ಏರಿಕೆ ಆಗಿದೆ. ಈ ಪೈಕಿ 10,55,612 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 2,34,483 ಸಕ್ರಿಯ ಪ್ರಕರಗಳಿವೆ. ಈ ಪೈಕಿ ಬೆಂಗಳೂರು ನಗರದಲ್ಲೇ 1,62,171 ಸಕ್ರಿಯ ಪ್ರಕರಣಗಳಿವೆ.
Advertisement
ಇಲ್ಲಿಯವರೆಗೆ ಒಟ್ಟು 14,283 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 16,213 ಆಂಟಿಜನ್, 1,73,400 ಆರ್ಟಿ ಪಿಸಿಆರ್ ಸೇರಿದಂತೆ ಒಟ್ಟು 1,89,613 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ಒಟ್ಟು 1,04,637 ಮಂದಿಗೆ ಲಸಿಕೆ ನೀಡಲಾಗಿದೆ.
ಐಸಿಯು ಸೋಂಕಿತರ ಸಂಖ್ಯೆ 1,280ಕ್ಕೆ ಏರಿಕೆ ಆಗಿದ್ದು, ಬೆಂಗಳೂರು ನಗರದಲ್ಲಿ 259, ಕಲಬುರಗಿಯಲ್ಲಿ 265, ದಾವಣಗೆರೆಯಲ್ಲಿ 85 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.