ಮಡಿಕೇರಿ: ಬೆಳಗಾವಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಮರಾಠಿಗರೇ ಇರುವುದರಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎಂಬ ಮಹಾರಾಷ್ಟ್ರ ಸಿಎಂ ಉದ್ಭವ್ ಠಾಕ್ರೆ ಹುಚ್ಚುತನದ ಮಾತನ್ನು ನೆಗ್ಲೇಟ್ ಮಾಡೋದು ಒಳ್ಳೇಯದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಸಿಎಂ ಮಾತು ಸಾಂದರ್ಭಿಕವಾಗಿಯೂ ಇರಲ್ಲ, ತಾತ್ವಿಕವಾಗಿಯೂ ಇರಲ್ಲ. ಅದಕ್ಕೆ ಉತ್ತರ ನೀಡದೇ ಇದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿರುವ ಯಾವುದೇ ಭಾಷಿಕನಾದರೂ ಅವರು ಕನ್ನಡಿಗರೆ ಆಗಿರುತ್ತಾರೆ. ಕರ್ನಾಟಕದ ಒಂದಿಂಚು ಜಾಗವನ್ನೂ ಬಿಡಲು ಸಾಧ್ಯವಿಲ್ಲ. ಸುಮ್ಮನೆ ಈ ರೀತಿಯಲ್ಲಿ ಅವರು ಪುಂಡಾಟಿಕೆಯನ್ನು ನಡೆಸುತ್ತಿದ್ದಾರೆ. ಗಡಿ ವಿವಾದ ಈಗಾಗಲೇ ನ್ಯಾಯಲಯದಲ್ಲಿ ಇದೆ. ಹಾಗೆ ಇದ್ದರೂ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.