ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬಕ್ಕೆ ನಾಲ್ಕು ದಿನ ಮಾತ್ರ ಬಾಕಿ ಇದೆ. ಈ ಹಿನ್ನೆಲೆ ರಾಜ್ಯ ವಕ್ಫ್ ಮಂಡಳಿಯು ಮುಸ್ಲಿಂ ಸಮುದಾಯಕ್ಕೆ ಮಹತ್ವದ ಆದೇಶ ನೀಡಿದೆ.
ಕೊರೊನಾ ಲಾಕ್ಡೌನ್ ವಿಸ್ತರಣೆ ಹಿನ್ನೆಲೆ ಮೇ 31ರವರೆಗೆ ಮಸೀದಿ, ಈದ್ಗಾ ಮತ್ತು ದರ್ಗಾಗಳಲ್ಲಿ ವಿಶೇಷ ಸಾಮೂಹಿಕ ನಮಾಜ್ಗೆ ನಿರ್ಬಂಧ ಮುಂದುವರಿಸಿ ರಾಜ್ಯ ವಕ್ಫ್ ಮಂಡಳಿಯು ಆದೇಶ ಹೊರಡಿಸಿದೆ. ಈ ಆದೇಶವು ಇಂದು ರಾತ್ರಿಯ ವಿಶೇಷ ಷಬ್ ಎ ಬರಾತ್ ನಮಾಜ್, ರಂಜಾನ್ ಹಬ್ಬದ ವಿಶೇಷ ನಮಾಜ್ ಮತ್ತು ಶುಕ್ರವಾರದ ವಿಶೇಷ ನಮಾಜ್ಗಳಿಗೆ ಅನ್ವಯವಾಗಲಿದೆ ಎಂದು ಬೋರ್ಡ್ ನ ಸಿಇಒ ಇಸ್ಲಾವುದ್ದೀನ್ ಗದ್ಯಾಳ ಅವರು ತಿಳಿಸಿದ್ದಾರೆ.
Advertisement
ಈ ಮೂಲಕ ಕೊರೊನಾ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಮುಂದುವರಿಸಲಾಗಿದೆ. ಜೊತೆಗೆ ರಂಜಾನ್ ಹಬ್ಬದಂದು ವಿಶೇಷ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.
Advertisement
ಹಬ್ಬದ ದಿನ ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಮುಸ್ಲಿಂ ಬಾಂಧವರು ಪರಸ್ಪರ ಕೈಕುಲುಕಿ, ತಬ್ಬಿಕೊಂಡು ಶುಭಾಶಯ ಕೋರುವುದಕ್ಕೂ ನಿರ್ಬಂಧ ಹೇರಲಾಗಿದೆ. ಗೆಳೆಯರನ್ನು ಮನೆಗೆ ಕರೆಯುವುದು, ಗೆಳೆಯರು ಅಥವಾ ಬಂಧುಗಳ ಮನೆಗೆ ಹೋಗುವಂತಿಲ್ಲ. ಅಷ್ಟೇ ಅಲ್ಲದೆ ಅಂದು ಕುಟುಂಬ ಸಮೇತ ಸುತ್ತಾಡಲು ಹೊರಗೆ ಹೋಗದಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ.