– ಗಾಯಗೊಂಡವರಿಗೆ 50 ಸಾವಿರ ರೂ.
ಮುಂಬೈ: ಭಾರೀ ಮಳೆಯಿಂದಾಗಿ 138 ಮಂದಿ ಸಾವನ್ನಪ್ಪಿದ್ದು, 90 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
Mahad, Raigad landslide update | A total of 44 bodies retrieved from the debris till now from 2 locations. 35 injured are under treatment. Total 6 locations experienced landslides in Raigad district: Raigad District Collector, Nidhi Chaudhary #Maharashtra
— ANI (@ANI) July 24, 2021
Advertisement
ಕಳೆದೊಂದು ವಾರದಿಂದ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಥಾಣೆ, ಪುಣೆ, ರಾಯಘಡ ಮುಂತಾದ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಹೆಚ್ಚಾಗುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಮತ್ತು ಭೂಕುಸಿತದಿಂದ ಇದುವರೆಗೂ 138 ಜನರು ಸಾವನ್ನಪ್ಪಿದ್ದಾರೆ. ರಾಯಘಡ ಜಿಲ್ಲೆಯೊಂದರಲ್ಲೇ ಭೂಕುಸಿತದಿಂದ 36 ಜನರು ಸಾವನ್ನಪ್ಪಿದ್ದಾರೆ. ಮುಂಬೈನ ಗೋವಂಡಿ ಪ್ರದೇಶದಲ್ಲಿ ಕಟ್ಟಡ ಕುಸಿದಿದ್ದು ಇದರಲ್ಲಿ 3 ಜನರು ಸಾವನ್ನಪ್ಪಿದ್ದಾರೆ ಮತ್ತು 7 ಜನರು ಗಾಯಗೊಂಡಿದ್ದಾರೆ. ಸತಾರ ಜಿಲ್ಲೆಯಲ್ಲಿ ಮಳೆಯಿಂದ 27 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಮಳೆಯಲ್ಲಿ ಸಿಲುಕಿದವರನ್ನು ರಕ್ಷಿಸಲು 9ಎನ್ಡಿಆರ್ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಕೊಂಕಣ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
Advertisement
Maharashtra | Teams of the National Disaster Response Force (NDRF) are engaged in rescue and relief operations in flood-affected Kolhapur pic.twitter.com/ULp5KckSsX
— ANI (@ANI) July 24, 2021
Advertisement
Advertisement
#WATCH | Maharashtra: NDRF rescued 2 Power Dept staff, hanging by safety belts on electric cables, as a raging Surya River flowed below them in Manor, Palghar. They were restoring the power supply in the area & had unsuccessfully attempted to reach the other side. (23.07.2021) pic.twitter.com/5GhWQJiLc8
— ANI (@ANI) July 24, 2021
ಮಳೆಗೆ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಫೋನ್ ಮಾಡಿರುವ ರಾಷ್ಟ್ರಪತಿ ಕೋವಿಂದ್ ಮಹಾರಾಷ್ಟ್ರದ ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ರಣ ಮಳೆಗೆ ಮಹಾರಾಷ್ಟ್ರದಲ್ಲಿ 100 ಮಂದಿ ಬಲಿ- 1,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ
President Kovind called Maharashtra Governor Bhagat Singh Koshyari and expressed his concern over the loss of life and property in the state due to rains and floods. The Governor apprised him about rescue and relief works undertaken to mitigate people’s plight: Rashtrapati Bhavan pic.twitter.com/mUPnXQ15iw
— ANI (@ANI) July 24, 2021
ಮಹಾರಾಷ್ಟ್ರದ ರಾಯಘಡದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚುವರಿಯಾಗಿ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಧಾನಮಂತ್ರಿಗಳ ಕಚೇರಿ ಘೋಷಿಸಿದೆ. ಭೂಕುಸಿತದಲ್ಲಿ ಗಾಯಗೊಂಡಿರುವವರಿಗೆ 50 ಸಾವಿರ ರೂ. ನೀಡುವುದಾಗಿ ಘೋಷಿಸಲಾಗಿದೆ.