Connect with us

Districts

ಮನೆಯ ಗೋಡೆ ಕುಸಿತ – 6 ಜನ ಪ್ರಾಣಾಪಾಯದಿಂದ ಪಾರು

Published

on

ಗದಗ: ಎರಡು ದಿನ ಸುರಿದ ಭಾರೀ ಮಳೆಗೆ ಮನೆಯ ಗೋಡೆ ನೆನೆದು ಕುಸಿತವಾಗಿದ್ದು, ಕ್ಷಣಾರ್ಧದಲ್ಲಿ 6 ಜನ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ ಗ್ರಾಮದಲ್ಲಿ ನಡೆದಿದೆ.

ಕಮಲವ್ವ ಮಡಿವಾಳ ಅವರ ಮನೆಗೊಡೆ ಕುಸಿತವಾಗಿದೆ. ಲಖಮಾಪುರ ಗ್ರಾಮದಲ್ಲಿ ಕುಸಿತವಾದ ಮನೆಗೋಡೆ ಒಳಭಾಗದಲ್ಲಿ 6 ಜನ ಮಲಗಿದ್ದರು. ಈ ವೇಳೆ ಮಳೆಯಲ್ಲಿ ನೆನೆದಿದ್ದ ಗೋಡೆ ಕುಸಿದಿದೆ. ಅದೃಷ್ಟವಶಾತ್ ಗೋಡೆ ಹೊರಭಾಗಕ್ಕೆ ಬಿದ್ದಿದ್ದು, ಕುಸಿತವಾಗುತ್ತಿದ್ದಂತೆ ಕುಟುಂಬ ಎದ್ದು ಓಡಿದೆ. ಇದರಿಂದ ಭಾರೀ ಅನಾಹುತ ತಪ್ಪಿದೆ ಎನ್ನಲಾಗುತ್ತಿದೆ.

ಕಳೆದ ಬಾರಿ ಮಲಪ್ರಭಾ ನದಿ ಪ್ರವಾಹಕ್ಕೆ ಮನೆ ಕಳೆದುಕೊಂಡು ತಗಡು ಶೀಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದ ಎದುರಿನ ಮನೆಯವರೂ ಶಬ್ಧಕ್ಕೆ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಫೋನ್ ಮಾಡಿದರೂ ಗ್ರಾಮಲೆಕ್ಕಾಧಿಕಾರಿ ಅಥವಾ ತಹಶೀಲ್ದಾರ್ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

Click to comment

Leave a Reply

Your email address will not be published. Required fields are marked *