ಮಂಗಳೂರು: ಮನೆ ಮೇಲೆ ಮದುವೆ ದಿಬ್ಬಣದ ಬಸ್ ಉರುಳಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿ 35 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಗಡಿಭಾಗ ಕೇರಳದ ಪಾಣತ್ತೂರಿನಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಚನಿಲ ಕೊಗ್ಗು ನಾಯ್ಕ ಎಂಬವರ ಪುತ್ರಿ ಹಾಗೂ ಕೊಡಗು ಜಿಲ್ಲಾ ವ್ಯಾಪ್ತಿಯ ಕರಿಕೆಯ ವರನ ಮನೆಯಲ್ಲಿ ಮದುವೆ ನಿಗದಿಯಾಗಿತ್ತು. ಈ ಸಮಾರಂಭಕ್ಕ ವಧುವಿನ ಊರು ಈಶ್ವರಮಂಗಲದಿಂದ ದಿಬ್ಬಣ ಬಸ್ ಹೋಗುತ್ತಿತ್ತು. ವಧು ಮತ್ತು ಇತರರು ಟಿಟಿ ವಾಹನದಲ್ಲಿ ಹೋಗುತ್ತಿದ್ದರು.
Advertisement
Advertisement
ಈ ವೇಳೆ 63 ಪ್ರಯಾಣಿಕರೊಂದಿಗೆ ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಸುಮಾರು 35 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕೇರಳ ಮತ್ತು ಮಂಗಳೂರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
ಅಪಘಾತ ಕುರಿತಂತೆ ತನಿಖೆ ನಡೆಸಲು ಕೇರಳ ಸಾರಿಗೆ ಮಂತ್ರಿ ತಿಳಿಸಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.