-ಆರೋಗ್ಯಾಧಿಕಾರಿಗಳಿಗೆ ಬಾಗಿಲು ತೆಗೆಯದ ರೇಖಾ ಮ್ಯಾನೇಜರ್
ಮುಂಬೈ: ಮನೆಯ ಸೆಕ್ಯೂರಿಟಿ ಗಾರ್ಡ್ ಗೆ ಕೊರೊನಾ ಸೋಂಕು ತಗುಲಿದ್ದರೂ ಬಾಲಿವುಡ್ ನಟಿ ರೇಖಾ ಕೋವಿಡ್ ಪರೀಕ್ಷೆಗೆ ಹಿಂದೇಟು ಹಾಕಿದ್ದಾರೆ.
ನಟಿ ರೇಖಾ ವಾಸವಾಗಿರುವ ಮುಂಬೈನ ಬಾಂದ್ರಾದ ಏರಿಯಾದ ನಾಲ್ಕು ಸೆಕ್ಯೂರಿಟಿ ಗಾರ್ಡ್ ಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ನಾಲ್ವರು ಒಂದೇ ಏರಿಯಾದಲ್ಲಿರೋದರಿಂದ ಒಬ್ಬರನ್ನೊಬ್ಬರ ಸಂಪರ್ಕದಲ್ಲಿದ್ದರು. ಭದ್ರತಾ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ನಟಿ ರೇಖಾ, ಮ್ಯಾನೇಜರ್ ಫರ್ಜಾನಾ ಸೇರಿದಂತೆ ಮನೆಯ ಕೆಲಸದ ನಾಲ್ವರಿಗೆ ಕೋವಿಡ್-19 ಪರೀಕ್ಷೆ ಮಾಡಿಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಸೂಚಿಸಿದ್ದರು.
Advertisement
Advertisement
ಕೋವಿಡ್ ಪರೀಕ್ಷೆಗೆ ರೇಖಾ ಅವರ ಮನೆಗೆ ಹೋದ್ರೆ ಮ್ಯಾನೇಜರ್ ಫರ್ಜಾನಾ ಬಾಗಿಲು ತೆಗೆಯದೇ ಅಧಿಕಾರಿಗಳಿಗೆ ತಮ್ಮ ಮೊಬೈಲ್ ನೀಡಿದ್ದಾರೆ. ರೇಖಾ ಅವರ ಮ್ಯಾನೇಜರ್ ಜೊತೆ ಮುಂಬೈ ಮಹಾನಾಗರ ಪಾಲಿಕೆಯ ಹಿರಿಯ ಆರೋಗ್ಯಧಿಕಾರಿ ಸಂಜಯ್ ಫುದೆ ಮಾತನಾಡಿದ್ದಾರೆ. ರೇಖಾ ಅವರು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಅವರ ಆರೋಗ್ಯ ಚೆನ್ನಾಗಿದ್ದು, ತಮ್ಮ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ರೇಖಾ ಮನೆಯಿಂದ ಹೊರಗೆ ಹೋಗಿಲ್ಲ ಹಾಗೂ ಯಾರ ಸಂಪರ್ಕಕ್ಕೂ ಬಂದಿಲ್ಲ. ಹಾಗಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಫರ್ಜಾನಾ ಅಧಿಕಾರಿಗಳಿಗೆ ತಿಳಿಸಿದ್ದಾರೆ.
Advertisement
Advertisement
ಕೊನೆಗೆ ಮಹಾನಗರ ಪಾಲಿಕೆ ರೇಖಾ ಅವರ ಮನೆಯನ್ನು ಸ್ಯಾನಿಟೈಸ್ ಮಾಡಲು ಕಳುಹಿಸಿದ್ದಾರೆ. ಆಗಲೂ ರೇಖಾ ಅವರ ಮನೆಯ ಬಾಗಿಲು ತೆಗೆಯದ ಕಾರಣ ಸೆಕ್ಯೂರಿಟಿಯ ಕ್ಯಾಬಿನ್ ನಲ್ಲಿ ಕ್ರಿಮಿನಾಶಕ ಸಿಂಪಡನೆ ಮಾಡಿದ್ದಾರೆ.