Connect with us

Districts

ಮನೆಯೇ ಮಂತ್ರಾಲಯ ಇಂಪ್ಯಾಕ್ಟ್ – ಕಿಡ್ನಿ ಕಳೆದುಕೊಂಡ ಮಹಿಳೆಗೆ ಶಾಸಕರ ಸಹಾಯ

Published

on

ಶಿವಮೊಗ್ಗ: ಪಬ್ಲಿಕ್ ಟಿವಿ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದ ಮಹಿಳೆಗೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ನೆರವು ನೀಡಿದ್ದಾರೆ.

ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ನಡೆಸಿಕೊಡುವ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೊಪ್ಪ ಗ್ರಾಮದ ಮಹಿಳೆ ಯಶೋಧ ಎಂಬುವರು ಕರೆ ಮಾಡಿ ತನಗೆ ಎರಡು ಕಿಡ್ನಿ ಸಮಸ್ಯೆ ಇದೆ. ಜೀವನ ಸಾಗಿಸುವುದು ಕಷ್ಟವಾಗಿದೆ. ಈಗಾಗಿ ದಿನಸಿ ಕಿಟ್ ಕೊಡಿಸಿ ಎಂದು ಕೇಳಿಕೊಂಡಿದ್ದರು.

ಕಾರ್ಯಕ್ರಮ ವೀಕ್ಷಣೆ ಮಾಡಿದ್ದ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಅವರು, ತನ್ನ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಸಂಕಷ್ಟದಲ್ಲಿ ಇರುವುದನ್ನು ಗಮನಿಸಿದ್ದರು. ನಂತರ ಆ ಮಹಿಳೆ ವಿಳಾಸ ಪಡೆದು ಮಹಿಳೆ ಮನೆಗೆ ತಾವೇ ಸ್ವತಃ ಅವರೇ ಭೇಟಿ ನೀಡಿ 3 ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ಹಾಗೂ 5 ಸಾವಿರ ರೂಪಾಯಿ ಹಣವನ್ನು ಸಹ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕರ್ನಾಟಕದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದಿಲ್ಲ – ಸುರೇಶ್ ಕುಮಾರ್.. ಪರೀಕ್ಷೆ ನಡೆಸಬೇಕೇ? ನಿಮ್ಮ ಅಭಿಪ್ರಾಯವನ್ನು ತಿಳಿಸಿ https://tinyurl.com/yapuqlsk#Karnataka #SureshKumar #KannadaNews #SSLC #Covid19

Posted by Public TV on Tuesday, June 9, 2020

 

Click to comment

Leave a Reply

Your email address will not be published. Required fields are marked *

www.publictv.in