ಮುಂಬೈ: ಮಗ-ಸೊಸೆ ಬೈದು ಮನೆಯಿಂದ ಹೊರಹಾಕಿದ್ದಾರೆ ಎಂದು ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ಮಹಾರಾಷ್ಟ್ರದ ಗೋವಂಡಿಯಲ್ಲಿ ನಡೆದಿದೆ.
ಮೊಹಮ್ಮದ್ ಶಕೀಲ್ (42) ಹಾಗೂ ರಿಹಾನ್ನಾ ವಿರುದ್ಧ ಪ್ರಕರಣ ದಾಖಲಾಗಿದೆ. ದಂಪತಿ ವೃದ್ಧೆಗೆ ಕಿರುಕುಳ ನೀಡಿ ಮನೆಯಿಂದ ಹೊರಗೆ ಹಾಕಿದ್ದಾರೆ. ಈ ಸಂಬಂಧ ಮುಂಬೈನ ಶಿವಾಜಿನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
Advertisement
Advertisement
Advertisement
2002 ರಲ್ಲಿ ನನ್ನ ಪತಿ ತೀರಿಹೋದ ಬಳಿಕ ತನ್ನ ಮಕ್ಕಳ ಜತೆ ವಾಸವಾಗಿದ್ದೆ. ಆದರೆ ನನ್ನ ಸೊಸೆ ರಿಹಾನ್ನಾ ನನಗೆ ಕಿರುಕುಳ ನೀಡುತ್ತಿದ್ದಳು. ಮಗ ಹಾಗೂ ಸೊಸೆ ಇಬ್ಬರೂ ಸೇರಿ ಮನೆಯಿಂದ ತನ್ನನ್ನು ಓಡಿಸಿದ್ದಾರೆ ಎಂದು 70 ವರ್ಷದ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
ಮನೆಯನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದ್ದು, ಒಂದು ಮನೆಯಲ್ಲಿ ಹಿರಿಯ ಮಗ ವಾಸಿಸುತ್ತಿದ್ದು, ಇನ್ನೊಂದು ಮನೆಯಲ್ಲಿ ಕಿರಿಯ ಮಗ ವಾಸಿಸುತ್ತಾರೆ. ತಾಯಿಯ ಔಷಧಿಯ ಖರ್ಚನ್ನು ಇಬ್ಬರೂ ನೋಡಿಕೊಳ್ಳುತ್ತಿದ್ದರು. ಹಿರಿಯ ಮಗನ ಮನೆಯಲ್ಲಿ ಮಧ್ಯಾಹ್ನದ ಊಟ ನೀಡುತ್ತಿದ್ದರೆ, ಕಿರಿಯ ಮಗನ ಮನೆಯಲ್ಲಿ ರಾತ್ರಿಯ ಊಟ ನೀಡಲು ನಿರ್ಧಾರವಾಗಿತ್ತು.
ಕಿರಿಯ ಮಗ ಮೊಹಮ್ಮದ್ ಶಕೀಲ್ ಖರ್ಚು ನೀಡಲು ನಿರಾಕರಿಸುತ್ತಿದ್ದನು. ಒಮ್ಮೊಮ್ಮೆ ರಾತ್ರಿಯ ಊಟವನ್ನು ಸಹ ನೀಡುತ್ತಿರಲಿಲ್ಲ. ಆತನ ಪತ್ನಿ ಸಹ ಕಿರುಕುಳ ನೀಡುತ್ತಿದ್ದರು. ಮಗ ಹಾಗೂ ಸೊಸೆ ಬೈದು, ಹೊಡೆದು ಮನೆಯಿಂದ ಹೊರಗೆ ಓಡಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿದರು.