– ಕ್ವಾರಂಟೈನ್‍ನಲ್ಲಿರುವ 132 ಜನರ ಬೇಡಿಕೆಗೆ ಕಂಗೆಟ್ಟ ಬಿಬಿಎಂಪಿ
ಬೆಂಗಳೂರು: ನಮ್ಮನ್ನ ಮನೆಗೆ ಕಳುಹಿಸಿ, ನಾವು ವಾಕಿಂಗ್ ಮಾಡಬೇಕು ಬಿಡಿ ಎಂದು ಹೋಟೆಲ್ ಕ್ವಾರಂಟೈನ್‍ನಲ್ಲಿರುವ ಹೊಂಗಸಂದ್ರದ ಪುಂಡರು, ಬಿಹಾರಿಗಳು ಚಿತ್ರ ವಿಚಿತ್ರ ಬೇಡಿಕೆ ಇಡುತ್ತಿದ್ದಾರೆ.
ಬಿಹಾರಿಗಳು, ಹೊಂಗಸಂದ್ರದ ಪುಂಡರು ಸೇರಿದಂತೆ ಒಟ್ಟು 132 ಜನ ಕೋವಿಡ್-19 ಶಂಕಿತರು ಹೋಟೆಲ್ ಕ್ವಾರಟೈನ್‍ನಲ್ಲಿದ್ದಾರೆ. ಉತ್ತಮ ಊಟ, ವಸತಿ ಸೇರಿದಂತೆ ಎಲ್ಲ ರೀತಿಯ ಅಗತ್ಯ ಸೌಲಭ್ಯ ಒದಗಿಸಿದರೂ ಒಂದಿಲ್ಲೊಂದು ವಿಚಾರಕ್ಕೆ ಕೊರೊನಾ ಶಂಕಿತರು ತಗಾದೆ ತೆಗೆಯುತ್ತಲೇ ಇದ್ದಾರೆ. ಅವರ ಚಿತ್ರ ವಿಚಿತ್ರ ಬೇಡಿಕೆಗಳಿಂದ ಬಿಬಿಎಂಪಿ ಕಂಗೆಟ್ಟಿದೆ.
Advertisement
Advertisement
ಮನೆಗೆ ಕಳುಹಿಸುವಂತೆ ಕೊರೊನಾ ಶಂಕಿತರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಕಂಗೆಟ್ಟಿದ್ದಾರೆ. ಈ ವಿಚಾರವಾಗಿ ಬಿಬಿಎಂಪಿಯು ಪೊಲೀಸ್ ಇಲಾಖೆ ಜೊತೆ ಮಾತುಕತೆ ನಡಸಿದ್ದು, ಬಿಹಾರಿಗಳನ್ನು ಊರಿಗೆ ಕಳುಹಿಸಿಕೊಡಲು ಟಿಕೆಟ್ ವ್ಯವಸ್ಥೆ ಮಾಡಿಕೊಡುವಂತೆ ಬೇಡಿಕೆ ಇಟ್ಟಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
Advertisement
ಇತ್ತ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸೀಲ್‍ಡೌನ್ ಮಾಡಿದ್ದರೂ ಸ್ಥಳೀಯರ ಓಡಾಟ ಮಾತ್ರ ನಿಂತಿಲ್ಲ. ಪಾದರಾಯನಪುರ ಕಳ್ಳ ಮಾರ್ಗಗಳಲ್ಲಿ ಸಿಲ್‍ಡೌನ್ ಪ್ರದೇಶದ ಹೋಗುವುದು ಬರುವುದು ನಡೆಯುತ್ತಲೇ ಇದೆ. ಎಷ್ಟು ಹೇಳಿದರೂ ಅರ್ಥ ಮಾಡಿಕೊಳ್ಳದ ಪರಿಣಾಮ ಪೊಲೀಸರು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ. ರಸ್ತೆಗಳಲ್ಲಿ ಜನ ಗುಂಪು ಸೇರುವುದು, ರಸ್ತೆ ಬದಿಯಲ್ಲಿ ಕುಳಿತು ಹರಟೆ ಹೊಡೆಯುವ ದೃಶ್ಯ ಸಾಮಾನ್ಯವಾಗಿವೆ. ಮತ್ತೆ ಕೆಲವರು ನಾಯಿ ಹಿಡಿದುಕೊಂಡು ಇಂದು ಬೆಳಗ್ಗೆ ವಾಕ್ ಮಾಡುತ್ತಿದ್ದರು.