ಚಂಡೀಗಢ: ವಿವಾಹ ಸಂಭ್ರಮದಲ್ಲಿದ್ದ ಜನರ ಮಧ್ಯೆ ಕಳ್ಳನೊಬ್ಬ ಬೆಲೆಬಾಳು ವಜ್ರದ ಉಂಗುರದೊಂದಿಗೆ 3.4 ಲಕ್ಷ ಹಣ ಕದ್ದು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ಚಂಡೀಗಢದ ಸೆಕ್ಟರ್ 22ರಲ್ಲಿ ಹೋಟೆಲ್ನಲ್ಲಿ ನಡೆದಿದೆ.
ವ್ಯಕ್ತಿ ವಜ್ರದ ಉಂಗುರ ಮತ್ತು ಹಣ, ಎರಡು ಫೋನ್ಗಳಿದ್ದ ಪರ್ಸನ್ನು ಕದ್ದು ಪರಾರಿಯಾಗಿರುವ ದೃಶ್ಯಗಳು ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಂಗುರ ಕಳೆದುಕೊಂಡಾಕೆಯನ್ನು ಉಷಾ ಠಾಕೂರ್ ಎಂದು ಗುರುತಿಸಲಾಗಿದೆ.
Advertisement
Advertisement
ವಧು-ವರರಿಗೆ ಶುಭಕೋರಿ ಉಡುಗೊರೆ ನೀಡಲೆಂದು ಉಷಾ ಪರ್ಸ್ನಲ್ಲಿ ಉಂಗುರ ತಂದಿದ್ದಳು. ಈ ವೇಳೆ ಪರ್ಸ್ ಕಳುವಾಗಿದೆ. ಇತ್ತ ತನ್ನ ಪರ್ಸ್ ಕಾಣಿಸದಿದ್ದಾಗ ಎಚ್ಚೆತ್ತುಕೊಂಡ ಮಹಿಳೆ ಸಂಬಂಧಿಕರೊಂದಿಗೆ ಪರ್ಸ್ ಬಗ್ಗೆ ವಿಚಾರಿಸಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಂತರ ಆಕೆ ಪೊಲೀಸರ ಮೊರೆ ಹೋಗಿದ್ದಾಳೆ.
Advertisement
ಕುಟುಂಬದ ಸಂಬಂಧಿಯಂತೆ ನಟಿಸುತ್ತಾ ಮುಖವಾಡ ಧರಿಸಿ ಮದುವೆ ಮನೆ ನುಗ್ಗಿದ ವ್ಯಕ್ತಿ ಪರ್ಸ್ನೊಂದಿಗೆ ಹೋಟೆಲ್ ನಿಂದ ಹೊರ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಐಪಿಸಿ ಸೆಕ್ಷನ್ 380ರ ಅಡಿಯಲ್ಲಿ ಪ್ರಕರಣ ದಾಖಸಿಕೊಂಡಿರುವ ಪೊಲೀಸರು ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಕಳ್ಳನ ಫೋಟೋವನ್ನು ಅಂಟಿಸಿ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.