ಮದುವೆ ಸಮಾರಂಭ ಅಂದರೆ ಸಾಕು. ಹೆಣ್ಣು ಮಕ್ಕಳಿಗೆ ಮೆಹಂದಿ ಇರಲೇ ಬೇಕು. ಚಿಕ್ಕ-ಮಕ್ಕಳಿಂದ ದೊಡ್ಡವರವರೆಗೂ ಮೆಹಂದಿ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಮದುವೆ ಸಮಾರಂಭಗಳಲ್ಲಂತೂ ಮದುಮಗಳು ಮೆಹಂದಿ ಹಾಕದೇ ಇದ್ದರೆ ಮದುವೆ ಕಂಪ್ಲೀಟ್ ಆಗಿದೆ ಎಂದು ಎನಿಸುವುದೇ ಇಲ್ಲ. ನಿಜವಾಗಿ ಹೇಳಬೇಕೆಂದರೆ ವಧುವಿನ ಮಹೆಂದಿ ಭಾರತ ಹಳೆಯ ಸಂಸ್ಕøತಿ ಮತ್ತು ಸಾಂಪ್ರದಾಯವನ್ನು ಸೂಚಿಸುತ್ತದೆ.
Advertisement
ಮದುವೆ ಸಮಾರಂಭಗಳಲ್ಲಿ ವಧುವಿನ ಎರಡು ಕೈಗಳು ಮತ್ತಷ್ಟು ಸುಂದರ ಹಾಗೂ ಆಕರ್ಷಕವಾಗಿ ಎದ್ದು ಕಾಣಿಸಲು ಮೆಹಂದಿಯನ್ನು ಬಳಸಲಾಗುತ್ತದೆ. ಅಲ್ಲದೆ ಮದುವೆ ಸಂದರ್ಭದಲ್ಲಿ ವಧುವಿಗಷ್ಟೇ ಅಲ್ಲದೆ ವರನಿಗೂ ಮೆಹಂದಿ ಹಚ್ಚಲಾಗುತ್ತದೆ. ಹಿಂದಿನಿಂದಲೂ ಮದುವೆಯ ಎಲ್ಲ ಶಾಸ್ತ್ರಗಳಲ್ಲಿ ಮೆಹಂದಿ ಶಾಸ್ತ್ರ ಕೂಡ ಒಂದಾಗಿದೆ. ಮದುವೆ ಸಮಯದಲ್ಲಿ ವಧು-ವರನ ಕುಟುಂಬದವರು ಮೆಹಂದಿ ಶಾಸ್ತ್ರವನ್ನು ಆಯೋಜಿಸಿ ಮೆಹಂದಿ ಹಾಕಿಸಿಕೊಳ್ಳುವ ಹಳೆಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.
Advertisement
Advertisement
ಕೆಲವರು ಮೆಹಂದಿ ಹಾಕಿಸಿಕೊಂಡ ಬಳಿಕ ಅದು ಅತಿಯಾದ ಬಣ್ಣ ನೀಡಿದರೆ ತಮ್ಮ ಜೀವನ ಸಂಗಾತಿ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ನಿಮ್ಮ ದೇಹದಲ್ಲಿ ಉಷ್ಣಾಂಶ ಅಧಿಕವಾಗಿದ್ದರೆ ಮೆಹಂದಿ ಹೆಚ್ಚು ಬಣ್ಣ ಕೊಡುತ್ತದೆ ಎಂದು ಕೂಡ ಹೇಳುತ್ತಾರೆ. ಇಷ್ಟೆಲ್ಲಾ ಗಾಢವಾದ ಪ್ರಾಮುಖ್ಯತೆ ಇರುವ ಮೆಹಂದಿ ಬಗ್ಗೆ ತಿಳಿದಿದ್ದು, ಸಮಾರಂಭಗಳಲ್ಲಿ ಯಾವ ಮೆಹಂದಿ ಡಿಸೈನ್ಸ್ ಹಾಕಿಕೊಳ್ಳಬೇಕೆಂದು ತಿಳಿಯದೇ ಇರುವವರಿಗೆ ಒಂದಷ್ಟು ಮೆಹಂದಿ ಡಿಸೈನ್ಸ್ ಈ ಕೆಳಗಿನಂತಿವೆ.
Advertisement
ನವಿಲು ಡಿಸೈನ್ಸ್
ಈ ಸುಂದರವಾದ ಮೆಹಂದಿ ಡಿಸೈನ್ನಲ್ಲಿ ಕೈನ ಮೇಲಿನ ತುದಿಯಲ್ಲಿ ಎರಡು ನವಿಲುಗಳು ಅದಲು-ಬದಲಾಗಿ ತಲೆ ಬಾಗಿಸಿಕೊಂಡಿದ್ದು, ಕೈನ ಮಧ್ಯದಲ್ಲಿ ವಧು-ವರನನ್ನು ಮಂಟಪಕ್ಕೆ ಕರೆದೊಯ್ಯಲಾಗುತ್ತಿರುವಂತೆ ಚಿತ್ರ ಬಿಡಿಸಲಾಗಿದೆ. ಜೊತೆಗೆ ವಧು-ವರ ಇಬ್ಬರು ಹಾರ ಬದಲಿಸಿಕೊಳ್ಳುವಂತಿದ್ದು ಒಂದು ಸುಂದರ ಮದುವೆ ಕಥೆ ಹೇಳುವಂತೆ ತೋರುತ್ತದೆ.
ಮಿಕ್ಕಿ ಮೌಸ್ ಡಿಸೈನ್
ಈ ಮೆಹಂದಿ ಡಿಸೈನ್ನಲ್ಲಿ ವಧು ಬಹಳ ಸಿಂಪಲ್ ಹಾಗೂ ಡಿಫರೆಂಟ್ ಆಗಿರುವ ಮಿಕ್ಕಿಮೌಸ್ನ ಚಿತ್ರವನ್ನು ಕೈ ಮೇಲೆ ಬರೆಸಿಕೊಂಡಿದ್ದಾರೆ. ಈ ಡಿಸೈನ್ ಒಂದು ರೀತಿ ಮಹಿಳೆಯರಿಗೆ ಯುನಿಕ್ ಲುಕ್ ನೀಡುತ್ತದೆ.
ಹೂವಿನ ರಾಶಿ ಡಿಸೈನ್
ಇದೊಂದು ಯುನಿಕ್ ಮೆಹಂದಿ ಡಿಸೈನ್ ಆಗಿದ್ದು, ಹಲವಾರು ಮೆಹಂದಿ ಡಿಸೈನ್ಗಳ ಮಧ್ಯೆ ಒನ್ ಆಫ್ ದಿ ಬೆಸ್ಟ್ ಡಿಸೈನ್ ಎಂದೇ ಹೇಳಬಹುದು. ಕೈ ತುಂಬಾ ಹೂವಿನ ರಾಶಿಗಳಿಂದ ತುಂಬಿಕೊಂಡಿರುವ ಈ ಡಿಸೈನ್ ನೋಡಲು ಅತ್ಯಂತ ಆಕರ್ಷಕವಾಗಿದ್ದು, ಬಹಳ ಸುಂದರವಾಗಿ ಕಾಣಿಸುತ್ತದೆ.
ವಧು-ವರ ಡಿಸೈನ್
ವಧು ವರನ ಚಿತ್ರ ಹೊಂದಿರುವ ಈ ಮೆಹಂದಿ ಕಲಾ ವಿನ್ಯಾಸದಲ್ಲಿ, ನವಿಲು, ಕಮಲ, ಹೂಗಳಿದೆ ಹಾಗೂ ಇವೆಲ್ಲವೂ ವಧು-ವರರನ್ನು ಮದುವೆಗೆ ಸ್ವಾಗತ ಕೋರುವ ರೀತಿಯಲ್ಲಿದ್ದು, ಈ ಡಿಸೈನ್ ನೋಡಲು ಎರಡು ಕಣ್ಣುಗಳು ಸಾಲದು ಎಂದು ಹೇಳಿದರೆ ತಪ್ಪಾಗಲಾರದು.
ರಾಧಾ-ಕೃಷ್ಣ ಡಿಸೈನ್
ಒಂದು ಕೈನಲ್ಲಿ ರಾಧಾ-ಕೃಷ್ಣನೊಂದಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದು, ಕೃಷ್ಣನ ಜೊತೆ ರಾಧೆ ಕೊಳಲನ್ನು ಹಿಡಿದುಕೊಂಡಿರುವಂತೆ ಚಿತ್ರವನ್ನು ಬಿಡಿಸಲಾಗಿದೆ. ಮತ್ತೊಂದು ಕೈ ಮೇಲೆ ದೇವಾಲಯ, ಮಕ್ಕಳು, ಓಂ, ಸ್ವಸ್ತಿಕ್ ಚಿತ್ರದ ಜೊತೆ ದಿನಾಂಕ, ವರ್ಷವನ್ನು ಬರೆಯಲಾಗಿದೆ.