ಬೆಂಗಳೂರು: ಬಿಗ್ಬಾಸ್ ರಿಯಾಲಿಟಿ ಶೋನಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅರವಿಂದ್ ಒಂಟಿ ಮನೆಯಿಂದ ಆಚೆ ಬಂದ ಮೇಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ.
Advertisement
ಬಿಗ್ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ದಿವ್ಯಾ, ಅರವಿಂದ್ ಅವರು ಬಿಗ್ಬಾಸ್ ಮನೆಯಲ್ಲಿ ಕಳೆದಿರುವ ಕೆಲವು ಕ್ಯೂಟ್ ವೀಡಿಯೋಗಳು ಸಖತ್ ವೈರಲ್ ಆಗಿದ್ದವು. ಇದೀಗ ಅವರ ಕೆಲವು ಹೇಳಿಕೆಯ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮದುವೆ, ಸಿನಿಮಾ, ದಿವ್ಯಾ ಅವರ ಕುರಿತಾಗಿ ಅರವಿಂದ್ ಅವರಿಗೆ ಸಾಕಷ್ಟು ಪ್ರಶ್ನೆಗಳು ಎದುರಾಗುತ್ತಿವೆ. ಅರವಿಂದ್ ಕೊಟ್ಟಿರುವ ಉತ್ತರಗಳು ಮಾತ್ರ ಬುದ್ಧಿವಂತಿಕೆಯಿಂದ ಕೂಡಿದೆ.
Advertisement
Advertisement
ಮನೆಯಲ್ಲಿರುವ 20 ಜನರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಅರವಿಂದ್, ಜೋಡಿ ಟಾಸ್ಕ್ ನಂತರ ನಟಿ ದಿವ್ಯಾ ಉರುಡುಗ ಜೊತೆಯಾಗಿದ್ದರು. ಆಗಿನಿಂದ ಇಬ್ಬರ ನಡುವೆ ಒಂದು ಉತ್ತಮವಾದ ಸ್ನೇಹವಿತ್ತು. ಬಿಗ್ಬಾಸ್ನಲ್ಲಿ ಇಬ್ಬರು ಒಟ್ಟಿಗೆ ಇರುವ ಕೆಲವಷ್ಟು ಕ್ಯೂಟ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.
Advertisement
ಬಿಗ್ಬಾಸ್ ಮನೆಯಿಂದ ಹೊರ ಬಂದ ನಂತರ ಸ್ಪರ್ಧಿಗಳು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಚಾಟ್ ಮೂಲಕ ಅಭಿಮಾನಿಗಳ ಜೊತೆ ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಮಾತನಾಡುತ್ತಿದ್ದಾರೆ. ಪ್ರತಿ ಸಲ ಲೈವ್ ಬಂದಾಗಲೂ ಅರವಿಂದ್ಗೆ ದಿವ್ಯಾ ಕುರಿತಾಗಿ ಪ್ರಶ್ನೆಗಳು ಬಂದಿವೆ. ಅರವಿಂದ್ ನೀಡಿರುವ ಉತ್ತರಗಳು ಮಾತ್ರ ಸಖತ್ ವೈರಲ್ ಆಗುತ್ತಿವೆ.
ಸಿನಿಮಾ, ಸೀರಿಯಲ್ ಅಥವಾ ವೆಬ್ಸಿರೀಸ್ ಯಾವುದೇ ಅವಕಾಶಗಳು ಸಿಕ್ಕರೂ ಕೂಡ ನಾನು ಬಳಸಿಕೊಳ್ಳಲು ಇಷ್ಟಪಡುತ್ತೇನೆ. ಸದ್ಯ ಗಾಡಿ ಓಡಿಸಲು ಆಗ್ತಿಲ್ಲ, ಫಿಟ್ನೆಸ್ ಮುಖ್ಯ, ಹೀಗಾಗಿ ನಾನು ತಯಾರಿ ನಡೆಸುತ್ತಿದ್ದೇನೆ. ಬಿಗ್ಬಾಸ್ ಯಾರಿಗೂ ಅನ್ಯಾಯ ಮಾಡಲ್ಲ ಎನ್ನುವ ನಂಬಿಕೆ ಇದೆ. ವಿನ್ನರ್ ಯಾರು ಎಂದು ಹೇಳುತ್ತಾರೆ.
ದಿವ್ಯಾ ನನಗೆ ಲಕ್ಕಿ ಚಾರ್ಮ್…ಆಕೆ ಜೊತೆಗೆ ನಾನು ಒಂದು ಟಾಸ್ಕ್ ಕೂಡ ಸೋತಿಲ್ಲ. ಒಳ್ಳೆಯ ವ್ಯಕ್ತಿ ಹಾಗೂ ತುಂಬಾನೇ ಪಾಸಿಟಿವ್ ಆಗಿರುತ್ತಾರೆ. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ಕಾಂಪಿಟೇಷನ್ ಕೊಡುವ ಹುಡುಗಿ ಈಕೆ. ಇಬ್ಬರ ಸ್ನೇಹ ಹೀಗೆ ಮುಂದುವರಿದುಕೊಂಡು ಹೋಗಬೇಕು ಅಂದುಕೊಂಡಿರುವೆ. ನೋಡೋಣ ಹೇಗೆ ಏನು ಆಗುತ್ತದೆ ಎಂದು…ಮದುವೆ ಆಗೋಕೆ ಸ್ವಲ್ಪ ಟೈಮ್ ಕೊಡಿ ಎಂದ ಬಿಗ್ ಬಾಸ್ ಕೆಪಿ ಅರವಿಂದ್ ಹೇಳಿದ್ದಾರೆ
ಅರವಿಂದ್, ದಿವ್ಯಾ ಜೋಡಿಯನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಇಬ್ಬರ ಜೋಡಿ ಕುರಿತಾಗಿ ನೆಟ್ಟಿಗರು ತುಂಬಾ ಪ್ರೀತಿಯಿಂದ ಮಾತನಾಡಿಕೊಳ್ಳುತ್ತಿದ್ದಾರೆ.