ಪಾಟ್ನಾ: ಚುನಾವಣೆಯ ಮತದಾನದಂದೇ ಆರ್ಜೆಡಿ ನಾಯಕನೊಬ್ಬನ ಸಹೋದರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದ ಘಟನೆ ಬಿಹಾರದ ಪುರ್ನಿಯಾ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಶನಿವಾರ ಧರ್ದಾಹ ವಿಧಾನಸಭಾ ಕ್ಷೇತ್ರದ ಮಿತಿಯಲ್ಲಿ ಪುರ್ನಿಯಾದ ಸಾರ್ಸಿ ಪ್ರದೇಶದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಬೆನಿ ಸಿಂಗ್ ಎಂದು ಗುರುತಿಸಲಾಗಿದೆ. ಈತನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
Advertisement
Advertisement
ಮೃತ ಯುವಕ ಕಳೆದ ತಿಂಗಳು ಎಸ್ಟಿಎಫ್ ನಿಂದ ಬಂಧನಕ್ಕೊಳಗಾದ ಆರ್ಜೆಡಿ ನಾಯಕ ಬಿಟ್ಟು ಸಿಂಗ್ ಅಲಿಯಾಸ್ ಅನಿಕೇತ್ ಸಿಂಗ್ ಸಹೋದರನಾಗಿದ್ದಾನೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ತಿಳಿಸಿದ್ದಾರೆ.
Advertisement
ಯುವ ಆರ್ಜೆಡಿ ಮುಖಂಡ ಅನಿಕೇತ್ ಸಿಂಗ್ ಅವರನ್ನು ಪುರ್ನಿಯಾದ ಮ್ಯಾಕ್ಸ್-7 ಆಸ್ಪತ್ರೆಯ ಹೊರಗಡೆಯೇ ಎಸ್ಟಿಎಫ್ ಬಂಧಿಸಿತ್ತು. ಬಂಧನಕ್ಕೊಳಗಾದ ಸಿಂಗ್ ಅವರ ವಾಹನದಿಂದ ಎಕೆ-47, ಕಾರ್ಬೈನ್ ಮತ್ತು 66 ಸುತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿತ್ತು.