ಉಡುಪಿ: ಡ್ರಗ್ಸ್ ಕುರಿತು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ತನಿಖೆ ಚುರುಕುಗೊಂಡಿದ್ದು, ಇದೇ ವೇಳೆ ಸುಮಾರು 10 ರೂ. ಮೌಲ್ಯದ ಡ್ರಗ್ಸ್ನ್ನು ಪಾಣಿಪಾಲದಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಡ್ರಗ್ಸ್ ತಂಧೆ ಜಾಲವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ಜಿಲ್ಲೆಯ ಮಣಿಪಾಲದಲ್ಲಿ 10 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ ಪಡೆಯಲಾಗಿದ್ದು, ಉತ್ತರ ಭಾರತ ಮೂಲದ ಆರೋಪಿ ಯುವಾಂಶು ಜೋಶಿ(20)ಯನ್ನು ಬಂಧಿಸಲಾಗಿದೆ. ಆಂತರಿಕ ಭದ್ರತಾ ವಿಭಾಗದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಮಣಿಪಾಲ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿ ಸುಮಾರು ಹತ್ತು ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಇದು ಎಂಡಿಎಂಎ ಮಾದಕ ಡ್ರಗ್ ಎಂದು ಗುರುತಿಸಲಾಗಿದೆ.
Advertisement
Advertisement
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಇನ್ನೂ ಹಲವರಿಗಾಗಿ ಗಾಳ ಬೀಸಿದ್ದಾರೆ. ಹೀಗಿರುವಾಗಲೇ ಮಣಿಪಾಲದಲ್ಲಿ ಇದೀಗ 10 ಲಕ್ಷ ರೂ.ಗಳ ಡ್ರಗ್ಸ್ ಪತ್ತೆಯಾಗಿದೆ.