-ಹರಿತವಾದ ಆಯುಧಗಳಿಂದ ಇರಿದ 5 ಹೆಣ್ಣು ಮಕ್ಕಳ ತಂದೆ
-ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಗಂಡ
ಲಕ್ನೋ: ಹುಟ್ಟುವ ಮಗು ಹೆಣ್ಣೋ ಅಥವಾ ಗಂಡೋ ಎಂದು ತಿಳಿದುಕೊಳ್ಳು ಪತ್ನಿಯ ಹೊಟ್ಟೆಯನ್ನ ಇರಿದಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಬುದೌನ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಏಳು ತಿಂಗಳ ಗರ್ಭಿಣಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪತಿಯನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Advertisement
ಸಿವಿಲ್ ಲೈನ್ ಇಲಾಖೆಯ ನೇಕಪುರ ಗಲ್ಲಿಯ ಪನ್ನಾಲಾಲ್ ಪತ್ನಿ ಅನಿತಾ ಹೊಟ್ಟೆಗೆ ಚಾಕು ಇರಿದ ಪತಿ. ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದು, ಆರನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅನಿತಾ ಸೋದರ ರವಿ, ಬಾವನಿಗೆ ಗಂಡು ಮಗುವಿನ ಅತಿಯಾದ ವ್ಯಾಮೋಹವಿತ್ತು. ಈ ಸಂಬಂಧ ದಂಪತಿ ನಡುವೆ ಆಗಾಗ್ಗೆ ಜಗಳ ಸಹ ನಡೆಯುತ್ತಿತ್ತು. ಇಂದು ಬೆಳಗ್ಗೆಯೂ ದಂಪತಿ ನಡುವೆ ಹುಟ್ಟು ಮಗುವಿನ ಬಗ್ಗೆ ಜಗಳ ನಡೆದಿದೆ. ಈ ವೇಳೆ ಪನ್ನಾಲಾಲ್ ಏಳು ತಿಂಗಳ ಗರ್ಭಿಣೆ ಹೊಟ್ಟೆಗೆ ಇರಿದು ಮಗು ಯಾವುದು ಎಂದು ನೋಡಲು ಮುಂದಾಗಿದ್ದಾನೆ ಎಂದು ಆರೋಪಿಸಿದ್ದಾರೆ.
Advertisement
Advertisement
ಘಟನೆ ಬಳಿಕ ಸೋದರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವ ಹಿನ್ನೆಲೆ ಸೋದರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅನಿತಾ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ರೆಫರ್ ಮಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿಯೂ ಸೋದರಿ ಅನಿತಾಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ರವಿ ಕಣ್ಣೀರು ಹಾಕುತ್ತಿದ್ದಾರೆ.
Advertisement
ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಪನ್ನಾಲಾಲ್ ಬಂಧನವಾಗಿದೆ. ಘಟನೆಯ ಮಾಹಿತಿ ಪನ್ನಾಲಾಲ್ ನೆರೆಹೊರೆಯವರ ನೀಡಿದ್ದರು. ಇತ್ತ ಅನಿತಾ ಪೋಷಕರು ಸಹ ಆರೋಪಿ ವಿರುದ್ಧ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್.ಪಿ. ಪ್ರವೀಣ್ ಸಿಂಗ್ ಹೇಳಿದ್ದಾರೆ.