ಹುಬ್ಬಳ್ಳಿ: ಮನೆಯಲ್ಲಿನ ಜಗಳಗಳಿಂದ ರೋಸಿ ಹೋದ ಪತಿ ಬೆಳಗ್ಗೆ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಸೆಟ್ಲಮೆಂಟ್ ಗಂಗಾಧರನಗರದಲ್ಲಿ ನಡೆದಿದೆ.
Advertisement
Advertisement
ಸೆಟ್ಲಮೆಂಟ್ ನಿವಾಸಿ ಸುನಿಲ್ ತನ್ನ ಪತ್ನಿ ಸಂಗೀತಾಳಿಗೆ ಚಾಕುವಿನಿಂದ ಇರಿದಿದ್ದಾನೆ. ಈ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುನಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ. ಎರಡು ತಿಂಗಳ ಮಗುವನ್ನು ಸಂಗೀತಾ ಕಂಕುಳಲ್ಲಿ ಹಿಡಿದುಕೊಂಡು ಕುಳಿತಿದ್ದರು. ಆಗ ಪತಿ ಸುನಿಲ್ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಮಗು ಕೂಡಾ ಗಾಬರಿಯಾಗಿ ಅಳತೊಡಗಿದೆ ನೆರೆಹೊರೆಯವರು ಬಂದು ನೋಡಿದ್ದಾರೆ. ಸಂಗೀತಾ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಕಿಮ್ಸ್ಗೆ ತರಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.
Advertisement
Advertisement
ಸಂಬಂಧಿಕರು ಮಗುವನ್ನು ಉಪಚರಿಸುತ್ತಿದ್ದಾರೆ. ಘಟನೆಯ ಬಗ್ಗೆ ಬೆಂಡಿಗೇರಿ ಠಾಣೆಯ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.