– ಮನೆಯವರ ವಿರುದ್ಧವಾಗಿ ಸಂಬಂಧಿ ಜೊತೆ ಮದ್ವೆ
ಲಕ್ನೋ: ಮನೆಯವರ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತಂದೆಯೊಬ್ಬ ತನ್ನ ಮಗಳು ಮತ್ತು ಅಳಿಯನ ಮೇಲೆ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯಲ್ಲಿ ನಡೆದಿದೆ.
ವಿನೋದ್ ಕುಮಾರ್ ಗೌತಮ್ ಮಗಳು ಮತ್ತು ಅಳಿಯನಿಗೆ ಗುಂಡು ಹಾರಿಸಿದ ವ್ಯಕ್ತಿ. ರಾಂಪುರ್ ಜಿಲ್ಲೆಯ ಸೈದ್ನಗರದಲ್ಲಿರುವ ದಂಪತಿಯ ನಿವಾಸದಲ್ಲಿ ಶನಿವಾರ ಗುಂಡು ಹಾರಿಸಿದ್ದನು. ಆದರೆ ಇಬ್ಬರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಸೈದ್ನಗರ ಪ್ರದೇಶದ ನಿವಾಸಿ ಪ್ರಶಾಂತ್ ಕುಮಾರ್ ಉತ್ತರಾಖಂಡದ ಕಾಶಿಪುರದ ಯುವತಿಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಮದುವೆಯಾಗಿದ್ದನು. ಈ ವಿವಾಹದಿಂದ ಹುಡುಗಿಯ ಕುಟುಂಬವು ಸಂತೋಷವಾಗಿರಲಿಲ್ಲ. ಹೀಗಾಗಿ ಆಕ್ರೋಶಗೊಂಡ ತಂದೆ ಮತ್ತು ಸಹೋದರ ಇಬ್ಬರು ಯುವತಿಯ ಮನೆಗೆ ಬಂದು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.
Advertisement
Advertisement
ಕಾಶಿಪುರ ಉತ್ತರಾಖಂಡದಲ್ಲಿ ವಾಸಿಸುವ ನನ್ನ ತಂದೆ ವಿನೋದ್ ಕುಮಾರ್ ಗೌತಮ್ ಸೈದ್ನಗರದಲ್ಲಿ ನಮ್ಮ ಮನೆಗೆ ಬಂದು ನನ್ನ ಮತ್ತು ಪತಿ ಪ್ರಶಾಂತ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಗಾಯಗೊಂಡ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹುಡುಗಿ ತಾಯಿಯ ಸೋದರಸಂಬಧಿಯನ್ನೇ ಮದುವೆಯಾಗಿದ್ದಾಳೆ. ಆದರೆ ಕುಟುಂಬದವರ ಅನುಮತಿಯಿಲ್ಲದೆ ಇಬ್ಬರೂ ವಿವಾಹವಾಗಿದ್ದಾರೆ ಎಂದು ಕುಟುಂಬದ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.