ಮಗಳ ಪ್ರಿಯಕರನ ಎದೆಗೆ 17 ಬಾರಿ ಚುಚ್ಚಿ ಚುಚ್ಚಿ ಕೊಂದ ತಂದೆ

– ಪುತ್ರಿಯ ಆತ್ಮಹತ್ಯೆಗೆ ಪ್ರಿಯಕರ ಕಾರಣವೆಂದು ಕೊಲೆ

ಚಿಕ್ಕಬಳ್ಳಾಪುರ: ತಂದೆಯೊಬ್ಬ ಮಗಳ ಪ್ರಿಯಕರನ ಎದೆಗೆ 17 ಬಾರಿ ಇರಿದು ಕೊಂದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ.

ಯಗವಮದ್ದಲಖಾನೆ ಗ್ರಾಮದ ನಿವಾಸಿ ಹರೀಶ್ (25) ಕೊಲೆಯಾದ ಯುವಕ. ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶ್ ಕೊಲೆ ಮಾಡಿದ್ದಾರೆ. ತನ್ನ ಮಗಳ ಆತ್ಮಹತ್ಯೆಗೆ ಪ್ರಿಯಕರನೇ ಕಾರಣ ಎಂದು 10 ತಿಂಗಳಿಂದ ಹೊಂಚು ಹಾಕಿದ್ದ ತಂದೆ ವೆಂಕಟೇಶ್ ತಡರಾತ್ರಿ ಯುವಕನನ್ನು ಕೊಲೆ ಮಾಡಿದ್ದಾನೆ.

- Advertisement -

ಮೃತ ಹರೀಶ್ ಮತ್ತು ಕೊಲೆ ಮಾಡಿದ ವೆಂಕಟೇಶ್ ಮಗಳು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕೊನೆಗೆ ಯುವತಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿಕೊಡಲಾಗಿತ್ತು. ಇದಾದ 10 ತಿಂಗಳ ಹಿಂದೆ ತನ್ನ ಮನೆಯಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಳು.

- Advertisement -

ಅಂದಿನಿಂದ ಈ ಸಾವಿಗೆ ಪ್ರಿಯಕರ ಹರೀಶ್ ಕಾರಣ. ಅವನನ್ನ ಪ್ರೀತಿ ಮಾಡಿದ್ದರಿಂದಲೇ ನನ್ನ ಮಗಳ ಸಾವಾಯಿತು ಎಂದು ವೆಂಕಟೇಶ್ ಆಕ್ರೋಶಗೊಂಡಿದ್ದನು. ಕೊನೆಗೆ ಶುಕ್ರವಾರ ತಡರಾತ್ರಿ ಬೈಕಿನಲ್ಲಿ ತೆರಳುತ್ತಿದ್ದ ಹರೀಶ್‍ನನ್ನ ಹಿಂಬಾಲಿಸಿ ಕೊಲೆ ಮಾಡಿದ್ದಾನೆ.

ಈ ಪ್ರಕರಣ ಸಂಬಂಧ ಆರೋಪಿಗಳಾದ ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶ್‍ನನ್ನು ಬಾಗೇಪಲ್ಲಿ ಸಿಪಿಐ ನಯಾಜ್ ಹಾಗೂ ಪಿಎಸ್‍ಐ ಸುನಿಲ್ ಕುಮಾರ್ ಬಂಧಿಸಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

- Advertisement -