Bengaluru CityCinemaDistrictsKarnatakaLatestMain Post

ಮಗಳ ಕೈಯಿಂದ ಕರುವಿಗೆ ಬಾಳೆಹಣ್ಣು ತಿನ್ನಿಸಿದ ಯಶ್

ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ಜೋಡಿ ಸದ್ಯಕ್ಕೆ ತಮ್ಮ ಇಬ್ಬರು ಮಕ್ಕಳ ಜೊತೆ ಕಾಲಕಳೆಯುತ್ತಿದ್ದಾರೆ. ನಟಿ ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು ಆಗಾಗ ತಮ್ಮ ಮಕ್ಕಳ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ತಮ್ಮ ಪತಿ ಯಶ್ ಮತ್ತು ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ದೇಹ ಅಪ್ಪ,ಅಮ್ಮ ಕೊಟ್ಟಿರೋ ಭಿಕ್ಷೆ – ಡ್ರಗ್ಸ್ ಬಗ್ಗೆ ಯಶ್ ಖಡಕ್ ಮಾತು

ಇತ್ತೀಚೆಗಷ್ಟೆ ಯಶ್ ಮತ್ತು ರಾಧಿಕಾ ತಮ್ಮ ಮಗನಿಗೆ ನಾಮಕರಣ ಮಾಡಿದ್ದಾರೆ. ದಂಪತಿ ತಮ್ಮ ಫಾರ್ಮ್ ಹೌಸ್‍ನಲ್ಲೇ ಸರಳವಾಗಿ ನಾಮಕರಣ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ನಾಮಕರಣ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಯಶ್ ತಮ್ಮ ಮಗನಿಗೆ ಯಥರ್ವ್ ಯಶ್ ಎಂದು ನಾಮಕರಣ ಮಾಡಿದ್ದಾರೆ. ಸದ್ಯಕ್ಕೆ ರಾಕಿಂಗ್ ದಂಪತಿ ತಮ್ಮ ಮಕ್ಕಳೊಂದಿಗೆ ಫಾರ್ಮ್ ಹೌಸ್‍ನಲ್ಲಿಯೇ ಕಾಲಕಳೆಯುತ್ತಿದ್ದಾರೆ. ಇದನ್ನೂ ಓದಿ: ಜೂನಿಯರ್ ಯಶ್‍ಗೆ ನಾಮಕರಣ ಸಂಭ್ರಮ

ಪಾರ್ಮ್ ಹೌಸ್‍ನಲ್ಲಿರುವ ಫೋಟೋವೊಂದು ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಯಶ್ ತಮ್ಮ ಮಗಳು ಐರಾಳ ಕೈಯಿಂದ ಹಸುವಿನ ಕರುವಿಗೆ ಬಾಳೆಹಣ್ಣು ತಿನ್ನಿಸುತ್ತಿರುವುದನ್ನು ಕಾಣಹುದಾಗಿದೆ. ರಾಧಿಕಾ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಗೆಷ್ಟೆ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಯಶ್, ಡ್ರಗ್ಸ್ ಅನ್ನೋದು ದೇಶಕ್ಕೆ, ಜಗತ್ತಿಗೆ ಮಾರಕವಾಗಿದೆ. ಡ್ರಗ್ಸ್ ಅಂದರೆ ಇಡೀ ಯುವ ಜನತೆಗೆ ಮಾರಕ. ಅದರಲ್ಲಿ ಯಾರ‍್ಯಾರು ಇದ್ದಾರೆ ಎಂಬುದನ್ನು ನೋಡಿದ್ರೆ, ಹತ್ತು ಡಿಪಾರ್ಟ್ ಮೆಂಟ್ ಇರುತ್ತೆ. ಆದರೆ ಹೈಲೈಟ್ ಆಗುವುದು ಕನ್ನಡ ಚಿತ್ರರಂಗ ಮಾತ್ರ. ಆದರೆ ಇದರಲ್ಲಿ ಇಡೀ ಚಿತ್ರರಂಗ ಅಂತ ಹೇಳಬೇಡಿ. ಯುವಕರು, ಯುವತಿಯರು, ನಮ್ಮ ರಾಜ್ಯದ ಜನರಿಗೆ ಆಗುತ್ತಿದೆ ಎಂದು ಹೇಳಿ. ಆಗ ನಾವೆಲ್ಲರೂ ಒಟ್ಟಾಗಿ ಸಮಾಜದ ಪ್ರಜೆಯಾಗಿ ಚಿಕ್ಕಮಕ್ಕಳಿಗೂ ಜಾಗೃತಿ ಮೂಡಿಸಬೇಕು ಎಂದಿದ್ದರು.

https://www.instagram.com/p/CE_FPRFAiIy/?igshid=1ut36kb2xb0id

ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ. ಅದು ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವುದು. ನಿಮ್ಮ ಪೋಷಕರು ನೀವು ಕೆಳಗೆ ಬಿದ್ದರೆ ಏನಾಗುತ್ತೋ ಎಂದು ಸಾಕಿರುತ್ತಾರೆ. ನನಗೂ ಮಕ್ಕಳಿದ್ದಾರೆ. ಪೋಷಕರು ಒಳ್ಳೆಯ ಊಟ ತಂದು ಮಕ್ಕಳಿಗೆ ಕೊಟ್ಟು ತಿನ್ನಿಸಿ ಬೆಳೆಸಿರುತ್ತಾರೆ. ಅಷ್ಟು ಕಾಳಜಿಯಿಂದ ಬೆಳೆಯಿಸಿರುವ ನಿಮ್ಮನ್ನು ಮುಂದೆ ಏನೋ ಆಗುತ್ತಾರೆ ಎಂದು ಕನಸು ಕಾಣುತ್ತಿರುತ್ತಾರೆ ಎಂದು ಯಶ್ ಹೇಳಿದ್ದರು.

 

ಯಾರ‍್ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೋ ಅವರಿಗೆ ಒಂದು ಮಾತನ್ನ ಹೇಳುವುದಕ್ಕೆ ಇಷ್ಟ ಪಡುತ್ತೀನಿ. ಡ್ರಗ್ಸ್ ಎಂದು ತೆಗೆದುಕೊಂಡು ಹಾಳಾಗಬೇಡಿ. ನಿಮ್ಮ ದೇಹವನ್ನು ನಿಮ್ಮ ಅಪ್ಪ, ಅಮ್ಮ ಕೊಟ್ಟಿರುವ ಭಿಕ್ಷೆ. ನಿಮಗೆ ಯಾವುದೇ ಅಧಿಕಾರ ಇಲ್ಲ. ನಿಮ್ಮ ಪೋಷಕರಿಗಾಗಿ ಒಳ್ಳೆಯ ಹೆಸರು, ಗೌರವದಿಂದ ಕೆಲಸ ಮಾಡಿ. ಇಂತಹ ದುಶ್ಚಟಗಳನ್ನು ಬಿಡಿ ಎಂದು ಯಶ್ ಖಡಕ್ ಸಂದೇಶವನ್ನು ನೀಡಿದ್ದರು.

Leave a Reply

Your email address will not be published.

Back to top button