– ಸುಮಲತಾಗೆ ಸರಿಯಾದ ಅಡ್ವೈಸರ್ ಇಲ್ಲ
ಮಂಡ್ಯ: ಸಿನಿಮಾ ರೀತಿಯಲ್ಲಿಯೇ ಸಂಸದೆಯಾಗಿ ಸುಮಲತಾ ಅಂಬರೀಶ್ ನಟನೆ ಮಾಡುತ್ತಿದ್ದಾರೆ. ಕರ್ಣ ಎಂದು ಹೆಸರು ಪಡೆದಿರುವ ಅಂಬರೀಶ್ರವರ ಕೊಡುಗೆಯೂ ಮಂಡ್ಯಕ್ಕೆ ಶೂನ್ಯ. ಸಂಸದೆ ಸುಮಲತಾ ಕೊರೊನಾ ಕಾಲದಲ್ಲಿ ಏನು ಮಾಡಿದ್ದಾರೆ ಎಂದು ಜೆಡಿಎಸ್ ಮಾಜಿ ಸಂಸದ ಶಿವರಾಮೇಗೌಡ ಪ್ರಶ್ನೆ ಮಾಡಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ಸ್ವಾಭಿಮಾನದ ಅಭ್ಯರ್ಥಿಗಳನ್ನು ಸುಮಲತಾರವರು ಹಾಕಲಿ ಇದು ಚಾಲೆಂಜ್ ಎಂದು ಸವಾಲೊಡ್ಡಿದ್ದಾರೆ. ಜೊತೆಗೆ ಸುಮಲತಾಗೆ ಸರಿಯಾದ ಅಡ್ವೈಸರ್ ಇಲ್ಲ. ಅವರು ಒಂದು ಪಕ್ಷಕ್ಕೆ ಸೇರಿಕೊಳ್ಳಲಿ, ಬಿಜೆಪಿ ಇಲ್ಲ, ಕಾಂಗ್ರೆಸ್ ಯಾವುದಾದರೂ ಸೇರಲಿ ಯಾವ ಪಕ್ಷವನ್ನು ಸೇರದಿದ್ದರೆ ವಾಟ್ ನೆಕ್ಟ್? ಮಂಡ್ಯ ಜನರು ದಡ್ಡರಲ್ಲ, ಒಂದು ಸಲ ಯಾಮಾರಿಸಿದ್ದೀರಾ, ಜನ ಮತ್ತೆ ಯಾಮಾರಲ್ಲ. ಯಾವುದಾದರೂ ಒಂದು ಪಕ್ಷ ಸೇರಿ ಆಗ ಅಲ್ಲಿನ ಮುಖಂಡರಾದರು ನಿಮ್ಮ ಜೊತೆ ಬರುತ್ತಾರೆ ಎಂದು ಸುಮಲತಾರವರಿಗೆ ರಾಜಕೀಯ ಕಿವಿಮಾತು ಹೇಳಿದ್ದಾರೆ.
Advertisement
Advertisement
ಸುಮಲತಾ ಮಂಡ್ಯ ಪಾಲಿಟಿಕ್ಸ್ ನಲ್ಲಿ ಬಿಗ್ ಜೀರೋ. ಆಕೆ ಬಗ್ಗೆ ಮಾತನಾಡದಂತೆ ನಮ್ಮ ನಾಯಕರಲ್ಲಿ ಮನವಿ ಮಾಡುತ್ತೇನೆ. ದೊಡ್ಡ ಸೊನ್ನೆಯಾಗಿರುವಾಗ ಅಂಬರೀಶ್ ಹೆಸರು ಹೇಳಿಕೊಂಡು ಹೋದವರು ಯಾರು? ಅಂಬರೀಶ್ ಗುಣಾನೇ ಬೇರೆ ಸುಮಲತಾ ಗುಣಾನೇ ಬೇರೆ. ಅಂಬರೀಶ್ ಪತ್ನಿ ಎಂದು ಹೈಜಾಕ್ ಮಾಡಿ ಮಂಡ್ಯ ಜನರ ಮನಸ್ಸು ಗೆದ್ದಿದ್ದಾರೆ ಅಷ್ಟೇ. ಅಂಬರೀಶ್ ಕಾಲದಲ್ಲೂ ಗಣಿ ನಡೆಯುತ್ತಿತ್ತು ಅಲ್ವಾ? ಆಗ ಯಾಕೆ ಇಯಮ್ಮ ನಿಲ್ಲಿಸಲಿಲ್ಲ. ಮಂಡ್ಯ ಜಿಲ್ಲೆಯಿಂದ ಹೋದವರಿಗೆ ಕಾಫಿ ಬೇಡ, ನೀವು ಒಂದು ಲೋಟ ನೀರು ಕೊಟ್ಟಿದ್ದರೆ ಸಾಕಾಗಿತ್ತು. ಮಂಡ್ಯ ಜನಕ್ಕೆ ಎಲ್ಲವೂ ಗೊತ್ತಿದೆ, ಹಾಗಾಗಿ ಇದನ್ನು ಇಲ್ಲಿಗೆ ಬಿಡಿ. ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಸುಮಲತಾರನ್ನು ಜನ ಆಗಲೇ ಮರೆತಿದ್ದರು, ಆದರೆ ನಮ್ಮ ನಾಯಕರೇ ಮಾತನಾಡಿ ಮತ್ತೆ ನೆನಪಿಸಿದರು ಎಂದಿದ್ದಾರೆ.
Advertisement
ಅಂಬರೀಶ್ ಸತ್ತಾಗ ಮಂಡ್ಯಕ್ಕೆ ಶವ ತೆಗೆದುಕೊಂಡು ಹೋಗುವುದು ಬೇಡ ಅಂತ ಈಯಮ್ಮ ಹೇಳಿದರು. ಆದರೆ ಕುಮಾರಸ್ವಾಮಿ ಮಂಡ್ಯಕ್ಕೆ ತಂದರು. ರಾಜ್ಕುಮಾರ್ ಪಕ್ಕದಲ್ಲೇ ಅಂಬಿ ಇರಬೇಕು ಅಂತ ಸಮಾಧಿಗೆ ಜಾಗ ಕೊಟ್ಟರು. ಸುಮಲತಾ ಆಂಧ್ರಕ್ಕೂ ಮಂಚವಾಡು ಅನಂತುಡು ಅಂದಂಗೆ ಅವರು ಅನಂತಪುರದವರು. ಅಂಬರೀಶ್ ಮದುವೆ ಆಗಿ ಬಂದ ಮೇಲೆ ಅವರ ಧರ್ಮಪತ್ನಿ ಅಂತ ಸ್ವೀಕಾರ ಮಾಡಿದ್ದೇವೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲಾ ಎನ್ನುವುದರ ಮೂಲಕ ಮತ್ತೆ ಸುಮಲತಾ ಮೂಲ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ?: ರಾಕ್ಲೈನ್ ವೆಂಕಟೇಶ್