ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಬೆಥನಿ ಶಿಕ್ಷಣ ಸಂಸ್ಥೆಯ 19 ಶಿಕ್ಷಕಿಯರಿಗೆ ಸೋಂಕು ತಗುಲಿದೆ.
ನಗರದಲ್ಲೇ ಶೇ.70ರಷ್ಟು ಪ್ರಕರಣ ಪತ್ತೆಯಾಗುತ್ತಿವೆ. ನಗರದ ಬೆಂದೂರುವೆಲ್ ನಲ್ಲಿರುವ ಬೆಥನಿ ಎಜ್ಯುಕೇಶನ್ ಸೊಸೈಟಿನ 19 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೀಲ್ ಡೌನ್ ಮಾಡಲಾಗಿದೆ.
Advertisement
Advertisement
ಇಲ್ಲಿನ ಓರ್ವ ಸಿಸ್ಟರ್ ಗೆ ಪಾಸಿಟಿವ್ ಆಗಿದ್ದ ಹಿನ್ನೆಲೆಯಲ್ಲಿ 90 ಜನರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ 19 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸದ್ಯ ಬೆಥನಿ ಎಜುಕೇಶನ್ ಸೊಸೈಟಿ ಸೇರಿ ಇತರೆ ಸಂಸ್ಥೆಗಳನ್ನು ಸೀಲ್ಡೌನ್ ಮಾಡಿದ್ದು, ಸೋಂಕಿತರನ್ನು ಕಾನ್ವೆಂಟ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಬೆಂದೂರ್ ವೆಲ್ ಚರ್ಚ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಈ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.