ಭುವನೇಶ್ವರ: ಭಾಷೆ ಗೊತ್ತಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯತ್ವ ಸ್ಥಾನದಿಂದ ಮಹಿಳೆ ಅನರ್ಹವಾಗಿರುವ ಘಟನೆ ಗಂಜಾಮ್ ಜಿಲ್ಲೆಯಲ್ಲಿ ನಡೆದಿದೆ.
ಎಂ. ಲಕ್ಷ್ಮೀ ಗಂಜಾಮ್ ಜಿಲ್ಲೆಯ ಛತ್ರಪುರ್ ಬ್ಲಾಕ್ ಅಡಿಯಲ್ಲಿ ಬರುವ ಆರ್ಯಪಲಿ ಗ್ರಾಮ ಪಂಚಾಯ್ತಿಯಿಂದ 2017ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಆದರೆ ಲಕ್ಷ್ಮೀಯ ಆಯ್ಕೆಯ ಕುರಿತಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಲಕ್ಷ್ಮೀ ಅವರಿಗೆ ಒಡಿಯಾ ಭಾಷೆ ಗೊತ್ತಿಲ್ಲ ಎಂದು ಆರೋಪಿಸಲಾಗಿತ್ತು.
Advertisement
Advertisement
1994ರ ಒಡಿಶಾ ಗ್ರಾಮ ಪಂಚಾಯ್ತಿ ಕಾಯ್ದೆ ಪ್ರಕಾರ ಒಡಿಯಾ ಭಾಷೆಯನ್ನು ಓದಲು, ಬರೆಯಲು ಹಾಗೂ ಮಾತನಾಡಕಲು ಬರಲಿಲ್ಲವೆಂದರೆ ಗ್ರಾಮಪಂಚಾಯ್ತಿಯಲ್ಲಿ ಯಾವುದೇ ಸ್ಥಾನವನ್ನು ಹೊಂದಲು ಅವಕಾಶ ಇರುವುದಿಲ್ಲ.
Advertisement
Advertisement
ಇದೀಗ ಸುದೀರ್ಘ ವಿಚಾರಣೆ ನಂತರ ಲಕ್ಷ್ಮೀ ಅವರಿಗೆ ಭಾಷೆ ಗೊತ್ತಿಲ್ಲ ಎಂದು ನ್ಯಾಯಾಲಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದೆ. ಲಕ್ಷ್ಮೀ ಅವರಿಗೆ ಒಡಿಯಾ ಗೊತ್ತಿಲ್ಲ ಎಂದು ಸ್ಪಷ್ಟವಾದ ಬಳಿಕ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತಾಗಿ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.