-46ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡ ಭಾರತ
-ಭಾರತ ಪರ ಏಕದಿನ ಕ್ರಿಕೆಟ್ಗೆ ಐವರು ಆಟಗಾರರು ಪದಾರ್ಪಣೆ
ಕೋಲಂಬೋ: ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಶ್ರೀಲಂಕಾ ತಂಡ 3 ವಿಕೆಟ್ಗಳಿಂದ ಗೆದ್ದು ವೈಟ್ ವಾಶ್ನಿಂದ ಪಾರಾಗಿದೆ.
3rd ODI. It's all over! Sri Lanka by 3 wickets (DLS Method) https://t.co/zPrSzVNiQp #SLvIND
— BCCI (@BCCI) July 23, 2021
Advertisement
ಮಳೆಯಿಂದಾಗಿ 47 ಓವರ್ಗೆ ಮೀಸಲಾಗಿದ್ದ ಪಂದ್ಯದಲ್ಲಿ ಭಾರತ ನೀಡಿದ 224ರನ್ಗಳ ಮೊತ್ತವನ್ನು ಚೆಸ್ ಮಾಡಲು ಹೊರಟ ಶ್ರೀಲಂಕಾ ಆರಂಭದಲ್ಲೇ ಮಿನೋದ್ ಭಾನುಕ 7ರನ್(17 ಎಸೆತ, 1 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಅವಿಷ್ಕಾ ಫರ್ನಾಂಡೊ ಮತ್ತು ಭಾನುಕ ರಾಜಪಕ್ಷ 109ರನ್(105 ಎಸೆತ) ಜೊತೆಯಾಟವಾಡಿ ಗೆಲುವಿನಂಚಿಗೆ ತಂದು ನಿಲ್ಲಿಸಿದರು. ಈ ವೇಳೆ ದಾಳಿಗಿಳಿದ ಚೇತನ್ ಸಕಾರಿಯಾ, 65ರನ್(56 ಎಸೆತ, 12 ಬೌಂಡರಿ) ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಭಾನುಕ ರಾಜಪಕ್ಷ ಅವರ ವಿಕೆಟ್ ಕಬಳಿಸಿದರು. ಬಳಿಕ ದಿಢೀರ್ ಕುಸಿತಕೊಳ್ಳಗಾದ ಲಂಕಾ ತಂಡ 20ರನ್ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತು. ಉತ್ತಮವಾಗಿ ಆಡುತ್ತಿದ್ದ ಅವಿಷ್ಕಾ ಫರ್ನಾಂಡೊ 76ರನ್(98 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಕೊನೆಗೆ ಶ್ರೀಲಂಕಾ ತಂಡ 39 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 227 ಸಿಡಿಸಿ ಗೆಲುವಿನ ನಗೆ ಬೀರಿತು. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ಈ ಬಾರಿ ಪದಕಕ್ಕೆ ಕೊರಳೊಡ್ಡುವಂತಿಲ್ಲ ತಾವೇ ಧರಿಸಿಕೊಂಡರಾಯಿತು!
Advertisement
Advertisement
ಭಾರತದ ಪರ ಡೆಬ್ಯೂ ಆಟಗಾರರಾದ ರಾಹುಲ್ ಚಹರ್ 3 ವಿಕೆಟ್, ಚೇತನ್ ಸಕಾರಿಯಾ 2 ವಿಕೆಟ್ ಮತ್ತು ಸಿ.ಎಂ ಗೌತಮ್ 1 ವಿಕೆಟ್ ಪಡೆದರು. ಇನ್ನುಳಿದ 1 ವಿಕೆಟ್ ಹಾರ್ದಿಕ್ ಪಾಂಡ್ಯ ಪಾಲಾಯಿತು.
Advertisement
ಭಾರತದ ಪರ ಐವರು ಆಟಗಾರರು ಪದಾರ್ಪಣೆ
ಈ ಮೊದಲು ಟಾಸ್ಕ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 6 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಭಾರತ ಪರ ಸಂಜು ಸ್ಯಾಮ್ಸನ್, ನಿತೇಶ್ ರಾಣಾ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್ ಮತ್ತು ಚೇತನ್ ಸಕಾರಿಯಾ ಏಕದಿನ ಕ್ರಿಕೆಟ್ಗೆ ಪಾದರ್ಪಣೆ ಮಾಡಿದರು.
ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಧವನ್ 13ರನ್(11 ಎಸೆತ, 3 ಬೌಂಡರಿ) ಸಿಡಿಸಿ ನಿರಾಸೆ ಮೂಡಿಸಿದರು. ಬಳಿಕ ಬಂದ ಸಂಜು ಸ್ಯಾಮ್ಸನ್, ಪೃಥ್ವಿ ಶಾ ಜೋತೆಗೂಡಿ 80ರನ್(74 ಎಸೆತ)ಗಳ ಜೊತೆಯಾಟವಾಡಿದರು. ಈ ವೇಳೆ ಅರ್ಧಶತದ ಹೊಸ್ತಿಲ್ಲಲ್ಲಿದ್ದ ಪೃಥ್ವಿ ಶಾ 49ರನ್( 49 ಎಸೆತ, 8ಬೌಂಡರಿ) ಸಿಡಿಸಿ ಔಟ್ ಅದರು. ಇವರ ಹಿಂದೆಯೇ ಸಂಜು ಸ್ಯಾಮ್ಸನ್ 46ರನ್(46 ಎಸೆತ, 5 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು. ಕೆಲ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 40ರನ್( 37 ಎಸೆತ, 7ಬೌಂಡರಿ) ಬಾರಿಸಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್ ಮ್ಯಾನ್ ಕೂಡ ಕ್ರೀಸ್ಗಚ್ಚಿ ನಿಲ್ಲುವ ಪ್ರಯತ್ನ ಮಾಡಲಿಲ್ಲ.
46 ರನ್ಗಳ ಅಂತರದಲ್ಲಿ 6 ವಿಕೆಟ್ -ಕುಸಿತ ಕಂಡ ಭಾರತ
ಅಖಿಲ ಧನಂಜಯ ಮತ್ತು ಪ್ರವೀಣ್ ಜಯವಿಕ್ರಮ ಅವರ ದಾಳಿಗೆ ನಳುಗಿದ ಭಾರತ ತಂಡ ಕುಸಿತಕ್ಕೊಳಗಾಯಿತು. ಕೆಲಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಎಲ್ಲ ಬ್ಯಾಟ್ಸ್ಮ್ಯಾನ್ಗಳು ಪೆವಿಲಯನ್ ಪರೇಡ್ ನಡೆಸಿದರು ಪರಿಣಾಮ 179 ರನ್ಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ 46 ರನ್ ಅಂತರದಲ್ಲಿ ಇನ್ನೂಳಿದ 6 ವಿಕೆಟ್ ಕಳೆದುಕೊಂಡು 43.1 ಓವರ್ ಗಳಲ್ಲಿ 225ರನ್ಗೆ ಆಲ್ಔಟ್ ಆಯಿತು.
???? ????: That moment when the 5⃣ ODI debutants received their #TeamIndia cap!???? ???? #SLvIND@IamSanjuSamson | @NitishRana_27 | @rdchahar1 | @Sakariya55 | @gowthamyadav88 pic.twitter.com/1GXkO13x5N
— BCCI (@BCCI) July 23, 2021
ಶ್ರೀಲಂಕಾ ಪರ ಅಖಿಲಾ ಧನಂಜಯ ಮತ್ತು ಪ್ರವೀಣ್ ಜಯವಿಕ್ರಮ ತಲಾ 3 ವಿಕೆಟ್ ಕಿತ್ತು ಮಿಂಚಿದರು. ದುಷ್ಮಂತ ಚಮೀರ 2 ವಿಕೆಟ್, ಚಮಿಕಾ ಕರುಣರತ್ನ ಮತ್ತು ದಾಸುನ್ ಶಾನಕಾ ತಲಾ 1ವಿಕೆಟ್ ಪಡೆದರು.