ದುಬೈ: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರನ್ನು ಸಾರ್ವಕಾಲಿಕ ಅತ್ಯುತ್ತಮ ವೇಗದ ಬೌಲರ್ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಆದರೆ ಅವರು ತಮ್ಮ ವೇಗದ ಬೌಲಿಂಗ್ನಿಂದಲೇ ಪ್ರಸ್ತುತ ಉತ್ತಮ ಫಾರ್ಮ್ ನಲ್ಲಿರುವ ಆಟಗಾರರನ್ನು ವಿಕೆಟ್ ತೆಗೆಯುವ ಬಗ್ಗೆ ಮಾತನಾಡಿ ಟ್ರೋಲ್ಗೆ ಒಳಗಾಗುತ್ತಾರೆ.
ಅಖ್ತರ್ ಈ ಹಿಂದೆ ತಮ್ಮ ವೇಗದ ಬೌಲಿಂಗ್ ಮೂಲಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಿಳುವ ಬಗ್ಗೆ ಮಾತನಾಡಿ ಟೀಂ ಇಂಡಿಯಾ ಅಭಿಮಾನಿಗಳಿಂದ ಟ್ರೋಲ್ ಆಗಿದ್ದರು. ಸದ್ಯ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಸ್ಟೀವ್ ಸ್ಮೀತ್ ವಿಚಾರವಾಗಿ ಐಸಿಸಿ ಅಖ್ತರ್ ಕಾಲು ಎಳೆದಿದೆ.
Advertisement
Advertisement
ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆಯನ್ನು ಅಖ್ತರ್ ಹೊಂದಿದ್ದಾರೆ. ಅವರ ಪೀಳಿಗೆಯ ಕೆಲವು ಅತ್ಯುತ್ತಮ ಬ್ಯಾಟ್ಸ್ಮನ್ಗಳು ರನ್ ಗಳಿಸುವುದಕ್ಕಿಂತ ವಿಕೆಟ್ ಕಾಯ್ದುಕೊಳ್ಳವಲ್ಲಿ ಹೆಚ್ಚು ಗಮನ ನೀಡುತ್ತಿದ್ದರು. ಇತ್ತ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಆಧುನಿಕ ಯುಗದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ಸ್ಮಿತ್ ಆಸ್ಟ್ರೇಲಿಯಾ ಪರ ಎಲ್ಲಾ ಮಾದರಿ ಕ್ರಿಕೆಟ್ ಹೆಚ್ಚು ಸ್ಥಿರವಾಗಿ ರನ್ ಗಳಿಸುವವರಲ್ಲಿ ಒಬ್ಬರಾಗಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಆಸೀಸ್ ತಂಡದ ಶಕ್ತಿಯಾಗಿದ್ದಾರೆ.
Advertisement
Advertisement
ಆದರೆ ಸ್ಮಿತ್ ಅವರನ್ನು ಸುಲಭವಾಗಿ ಹೊರಹಾಕಬಹುದು ಎಂದು ಅಖ್ತರ್ ಸೋಮವಾರ ಹೇಳಿದ್ದಾರೆ. ಇಎಸ್ಪಿಎನ್ ಕ್ರಿಕ್ಇನ್ಫೊ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಅಖ್ತರ್, ಸ್ಮಿತ್ ಅವರನ್ನು ಔಟ್ ಮಾಡಲು ಕೇವಲ ನಾಲ್ಕು ಎಸೆತಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಖ್ತರ್ ಟ್ವೀಟ್ ಹಾಗೂ ಆಶ್ಚರ್ಯದಿಂದ ನೋಡುವ ಹಾಗೂ ನಗುವ ಫೋಟೋವನ್ನು ಟ್ವೀಟ್ ಮಾಡಿ ಕಾಲೆಳೆದಿದೆ.
— ICC (@ICC) May 12, 2020