Connect with us

Corona

ಭಾರತದಲ್ಲಿ 12 ಲಕ್ಷ ಗಡಿದಾಟಿದ ಕೊರೊನಾ

Published

on

– 45 ಸಾವಿರ ಮಂದಿಗೆ ಸೋಂಕು, 1,129 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕೊರೊನಾ ವಿಜೃಂಭಿಸುತ್ತಿದ್ದು, ಕಳೆದ 24 ಗಂಟೆಯಲ್ಲಿ 45,720 ಮಂದಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 12.38 ಲಕ್ಷ ದಾಟಿದೆ.

ಕಳೆದ 24 ಗಂಟೆಯಲ್ಲಿ 1,129 ಮಂದಿ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 29,861ಕ್ಕೇರಿದೆ. ಚೇತರಿಸಿಕೊಂಡವರ ಸಂಖ್ಯೆ 7,82,606 ಲಕ್ಷ ಮೀರಿದೆ. ದೇಶದಲ್ಲಿ ಇದುವರೆಗೂ 12,38,635 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 4,26,167 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಜುಲೈ 22ರಂದು 3,50,823 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ 1,50,75,369 ಮಾದರಿಗಳ ಪರೀಕ್ಷೆಯನ್ನು ಇದುವರೆಗೂ ದೇಶದಲ್ಲಿ ಮಾಡಲಾಗಿದೆ. ಕೊರೊನಾ ಲಸಿಕೆ ಲಭ್ಯತೆಗೆ ಸಂಶೋಧನೆಗಳು ಮುಂದುವರೆದಿರುವ ಹೊತ್ತಲ್ಲೇ, ಯಾರೂ ಲಸಿಕೆಗಾಗಿ ಕಾಯುತ್ತಾ ಕೂರಬೇಡಿ. ಈಗ ಲಭ್ಯ ಇರುವ ಔಷಧಗಳ ಮೂಲಕವೇ ಸೋಂಕಿತರ ಚೇತರಿಕೆಗೆ ಕೃಷಿ ಮಾಡಿ, ಸಾವು ತಪ್ಪಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.

Click to comment

Leave a Reply

Your email address will not be published. Required fields are marked *