– 2ನೇ ಅಲೆಯ ಹೊಡೆತಕ್ಕೆ ಹಳೆ ದಾಖಲೆ ಉಡೀಸ್
– ಗುರುವಾರ ಸಿಎಂಗಳ ಜೊತೆ ಮೋದಿ ಸಭೆ
ನವದೆಹಲಿ: ಭಾರತದಲ್ಲಿ ಕೊರೋನಾ ವಿಶ್ವರೂಪ ಪ್ರದರ್ಶಿಸಿದೆ. ಕಳೆದ 24 ಗಂಟೆಗಳಲ್ಲಿ ಕೊರೋನಾ ಹೆಮ್ಮಾರಿ ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಒಂದು ಲಕ್ಷಕ್ಕೂ ಹೆಚ್ಚು ಹೊಸ ಕೇಸ್ಗಳು ವರದಿಯಾಗಿದೆ.
ನಿನ್ನೆ ಬರೋಬ್ಬರಿ 1,03,558 ಮಂದಿ ಸೋಂಕು ಬಾಧಿತರಾಗಿದ್ದಾರೆ. ದೇಶಕ್ಕೆ ಕೋವಿಡ್ ವೈರಸ್ ಕಾಲಿಟ್ಟು 14 ತಿಂಗಳು ಕಳೆದ್ರೂ, ಎಂದೂ ಕೂಡ ಈ ಪರಿ ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗಿರಲಿಲ್ಲ. ಕಳೆದ ವರ್ಷದ ಸೆಪ್ಟೆಂಬರ್ 16 ರಂದು, 97,894 ಕೇಸ್ ಬಂದಿದ್ವು. ಇದೇ ಇದುವರೆಗಿನ ಗರಿಷ್ಠವಾಗಿತ್ತು. ಆದರೇ, ಇದೀಗ ಎರಡನೇ ಅಲೆಯ ಹೊಡೆತಕ್ಕೆ ಹಳೆಯ ದಾಖಲೆ ಉಡೀಸ್ ಆಗಿದೆ.
Advertisement
Advertisement
ಅಮೆರಿಕ ಬಳಿಕ ಲಕ್ಷ ಕೇಸ್ ದಾಖಲಾದ ದೇಶ ನಮ್ಮದೇ ಆಗಿದೆ. ಸೋಂಕು ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷ ಸಮೀಪಿಸಿದೆ. ಆದರೆ ಕೋವಿಡ್ ಮರಣಗಳ ಸಂಖ್ಯೆ ಸ್ವಲ್ಪ ಕಡಿಮೆಯೇ ಇದೆ. ನಿನ್ನೆ 478 ಮಂದಿ ಕೊರೋನಾಗೆ ಬಲಿ ಆಗಿದ್ದಾರೆ.
Advertisement
ಎಂದಿನಂತೆ ಕೊರೋನಾ ಎರಡನೇ ಅಲೆಯ ಕೇಂದ್ರಬಿಂದು ಆಗಿರೋದು ಮಹಾರಾಷ್ಟ್ರ. ನಿನ್ನೆ ದೇಶದಲ್ಲಿ ಸೋಂಕು ಕೇಸ್ 1.03 ಲಕ್ಷ ಇದ್ರೆ, ಇದ್ರಲ್ಲಿ ಮಹಾರಾಷ್ಟ್ರದ ಪಾಲು 57 ಸಾವಿರ. ಸಕ್ರಿಯ ಕೇಸ್ಗಳ ಪಾಲು 4.50 ಲಕ್ಷಕ್ಕೂ ಹೆಚ್ಚಿದೆ. ಪರಿಣಾಮ ಇಂದು ರಾತ್ರಿಯಿಂದ ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದೆ. ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಛತ್ತೀಸ್ಘಡ, ಕರ್ನಾಟಕ, ದೆಹಲಿ, ತಮಿಳುನಾಡು ರಾಜ್ಯಗಳಿವೆ.
Advertisement
ಸರಿಯಾಗಿ ಒಂದು ತಿಂಗಳ ಹಿಂದೆ ದೇಶದಲ್ಲಿ ದಿನದ ಕೇಸ್ಗಳ ಸಂಖ್ಯೆ 15ರಿಂದ 16 ಸಾವಿರ ಇತ್ತು. ಕೇವಲ ಒಂದೇ ತಿಂಗಳಲ್ಲಿ ಸೋಂಕು ಪ್ರಮಾಣ ಆರು ಪಟ್ಟು ಹೆಚ್ಚಾಗಿದೆ. ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೇ ಗುರುವಾರ ಎಲ್ಲ ರಾಜ್ಯಗಳ ಸಿಎಂಗಳ ಸಭೆಯನ್ನು ಪ್ರಧಾನಿ ಮೋದಿ ಕರೆದಿದ್ದಾರೆ. ಅಂದು ಪ್ರಧಾನಿ ಟಫ್ ರೂಲ್ಸ್ ಪ್ರಕಟಿಸುವ ಸಾಧ್ಯತೆಗಳಿವೆ.
ಪ್ರಧಾನಿ ಸಭೆಗೂ ಮುನ್ನ ನಾಳೆ 11 ರಾಜ್ಯಗಳ ಆರೋಗ್ಯ ಸಚಿವರ ಸಭೆಯನ್ನು ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ್ ಕರೆದಿದ್ದಾರೆ. ದೇಶದ ಎಲ್ಲರಿಗೂ ಲಸಿಕೆ ನೀಡುವಂತೆ ಪ್ರಧಾನಿ ಮೋದಿಗೆ ದೆಹಲಿ ಸಿಎಂ ಕೇಜ್ರಿವಾಲ್ ಪತ್ರ ಬರೆದಿದ್ದಾರೆ. ಬೆಂಗಳೂರು, ಮುಂಬೈನಿಂದ ಬರೋ ಪ್ರಯಾಣಿಕರಿಗೆ ಅಸ್ಸಾಂ ಸರ್ಕಾರ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದೆ.