ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಸಿಗುವುದು ಖಚಿತವಾಗಿದೆ. ಬಾಕ್ಸಿಂಗ್‍ನಲ್ಲಿ ಮಹಿಳಾ ಸ್ಪರ್ಧಿ ಲವ್ಲೀನಾ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮಹಿಳೆಯರ ವೆಲ್ಟರ್ ವೇಟ್ 64-69 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಲವ್ಲೀನಾ ಚೈನೀಸ್ ತೈಪೆ(ತೈವಾನ್) ಚಿನ್ ಚೀನ್ ಅವರನ್ನು 4-1 ಅಂಕದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದನ್ನೂ ಓದಿ : ಒಲಿಂಪಿಕ್ಸ್ ಡೋಪಿಂಗ್ ಪರೀಕ್ಷೆ- 18 ಅಥ್ಲೀಟ್ಸ್ ಅನರ್ಹ
Advertisement
Lovlina has entered the Semi-Finals! Well done Lovlina Borgohain, what amazing news for India to wake up to today! We’ve been glued to the TV screen watching you in action: Union Sports Minister Anurag Thakur
(File pic) pic.twitter.com/yzzPnBlgRz
— ANI (@ANI) July 30, 2021
Advertisement
ಬಾಕ್ಸಿಂಗ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಎಲ್ಲರಿಗೂ ಪದಕ ಸಿಗಲಿದೆ. ಸೋತ ಇಬ್ಬರು ಸ್ಪರ್ಧಿಗಳಿಗೆ ಕಂಚಿನ ಪದಕವನ್ನು ನೀಡಲಾಗುತ್ತದೆ. ಜುಲೈ 24 ರಂದು ಮೀರಾಬಾಯಿ ಚಾನು ಅವರು ವೇಟ್ ಲಿಫ್ಟಿಂಗ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು.