ಉಡುಪಿ: ಭತ್ತದ ಪೈರು ನಾಟಿ ಮಾಡಿ ಕೃಷಿ ಬೇಸಾಯಕ್ಕೆ ಸರರ್ಕಾರ ಬೆಂಬಲಿಸುವುದಾಗಿ ಉಡುಪಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇದನ್ನೂ ಓದಿ: ಯತ್ನಾಳ್, ಯೋಗೇಶ್ವರ್ ಖಾಲಿ ಪಾತ್ರೆಗಳು-ಡಿಕೆಶಿ
Advertisement
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಗದ್ದೆ ಪುನರುತ್ಥಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 30 ಎಕರೆ ಹಡಿಲು ಭೂಮಿಯನ್ನು ಸಾವಯುವ ಕೃಷಿ ಮಾಡಲಾಗುತ್ತಿದೆ. ಗದ್ದೆಗೆ ಹಾಲನ್ನು ಅರ್ಪಿಸಿ ನೇಜಿ ನೇಡುವ ಮೂಲಕ ಯಂತ್ರ ನಾಟಿ ಹಾಗೂ ಕೈ ನಾಟಿಗೆ ಚಾಲನೆ ನೀಡಿದರು. ಸ್ಥಳೀಯರೊಂದಿಗೆ ಸೇರಿ ನೇಜಿ ನೆಟ್ಟರು. ಆರೂರು ರಂಜ ಬೈಲಿನಲ್ಲಿ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಶೆಟ್ಟರ್ ಚಾಲನೆ ನೀಡಿದರು.
Advertisement
Advertisement
ಮಾಧ್ಯಮದವರೊಂದಿಗೆ ಅವರು, ಹಡಿಲು ಭೂಮಿಯನ್ನು ಸಾವಯವ ಕೃಷಿ ಮಾಡುತ್ತಿರುವುದು ದೊಡ್ಡ ದಾಖಲೆಯಾಗಿದೆ. ಸದಾ ಸಮಾಜಮುಖಿಯಾಗಿ ಯೋಚಿಸಿ ಟ್ರಸ್ಟ್ನ್ನು ರಚಿಸಿ ಸ್ಥಳೀಯರನ್ನು ಒಳಗುಡಿಸಿಕೊಂಡು ಭೂಮಿಯನ್ನು ಹಸಿರಾಗಿಸುತ್ತಿರುವುದು ಶ್ಲಾಘನೀಯ ಎಂದರು.
Advertisement
ಉಡುಪಿಯ ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗಿನ ರಸ್ತೆಯನ್ನು ‘ಡಾ. ವಿ. ಎಸ್. ಆಚಾರ್ಯ’ ರಸ್ತೆ ಎಂದು ಈಗಾಗಲೇ ನಾಮಕರಣ ಮಾಡಿದ್ದು, ಇಂದು ಅವರ ಜನ್ಮದಿನದ ನಿಮಿತ್ತವಾಗಿ ನಾಮ ಫಲಕದ ಉದ್ಘಾಟನೆ ನೆರವೇರಿಸಿ, ಅಧಿಕೃತವಾಗಿ ಘೋಷಿಸಿ, ಪಕ್ಷದ ಹಿರಿಯ ನಾಯಕನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಲಾಯಿತು. pic.twitter.com/kyjYp23RPR
— Jagadish Shettar (@JagadishShettar) July 6, 2021
ರಾಜ್ಯ ಕೇಂದ್ರ ಸರರ್ಕಾರ ಸದಾ ನಿಮ್ಮೊಂದಿಗಿರುತ್ತದೆ. ಈ ಭಾಗದಲ್ಲಿ ಹಡಿಲು ಭೂಮಿ ಆಂದೋಲನಕ್ಕೆ ಸಹಕರಿಸಿದ ಸಂಘ – ಸಂಸ್ಥೆಯವರಿಗೆ, ಭೂ ಮಾಲಕರಿಗೆ, ಸ್ಥಳೀಯರಿಗೆ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದರು. ಬಿಜೆಪಿ ನಾಯಕರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ನಾಟಿ ಕಾರ್ಯದಲ್ಲಿ ಭಾಗಿಯಾದರು.
Visited Belapu Industrial area at Udupi and inspected the newly built oxygen plant in the area.#Udupi | @BJP4Karnataka | @BJP4India pic.twitter.com/y0LdIfCwmZ
— Jagadish Shettar (@JagadishShettar) July 5, 2021