ಬೆಂಗಳೂರು: ಬ್ರಿಟನ್ನಲ್ಲಿ ಕಂಡು ಬಂದ ರೂಪಾಂತರಿ ಕೊರೊನಾದಿಂದ ಕರ್ನಾಟಕದಲ್ಲೂ ಆತಂಕ ಶುರುವಾಗಿದೆ. ಆಂಗ್ಲರ ನಾಡಿನಿಂದ ಬಂದ 428 ಮಂದಿ ಮೇಲೆಯೂ ತೀವ್ರ ನಿಗಾ ಇರಿಸಿದೆ.
ಕೋವಿಡ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲದೇ ಬ್ರಿಟನ್ನಿಂದ ವಾಪಸ್ ಆಗಿದ್ದ 138 ಮಂದಿಯನ್ನು ರಾಜ್ಯ ಸರ್ಕಾರ ಟ್ರೇಸ್ ಔಟ್ ಮಾಡಿದೆ. ಎಲ್ಲರನ್ನು ಆರ್ಟಿಪಿಎಸ್ ಟೆಸ್ಟ್ಗೆ ಒಳಪಡಿಸಲಾಗಿದೆ. ಇದರಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ವ್ಯಾಪ್ತಿಯ ವಿಠಲನಗರದ ಇಬ್ಬರಿಗೆ ಸೋಂಕು ದೃಢಪಟ್ಟಿದೆ.
Advertisement
Advertisement
Advertisement
ಬೊಮ್ಮನಹಳ್ಳಿಯಲ್ಲಿ ಇನ್ನೂ ಆರು ಮಂದಿ ವರದಿ ಬರಬೇಕಿದೆ. ಬ್ರಿಟನ್ನಿಂದ ವಾಪಸ್ ಆದವರ ಪೈಕಿ 211 ಮಂದಿ ಬೆಂಗಳೂರಿನಲ್ಲಿ ಇದ್ದಾರೆ. ದಕ್ಷಿಣ ಕನ್ನಡದ 15, ಉಡುಪಿಯ 8, ಶಿವಮೊಗ್ಗದ 6, ಧಾರವಾಡದ 5, ತುಮಕೂರಿನ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು 5 ಮಂದಿ ಮತ್ತು ಮಂಡ್ಯದ ನಾಲ್ವರು, ಹಾಸನದ ಇಬ್ಬರು, ಬೆಳಗಾವಿ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಬಾಗಲಕೋಟೆಯಲ್ಲಿ ಒಬ್ಬರು ಇದ್ದು, ಎಲ್ಲರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಇವರ ಜೊತೆ ಸಂಪರ್ಕಕ್ಕೆ ಬಂದ ಕುಟುಂಬಸ್ಥರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬ್ರಿಟನ್ನಿಂದ ವಾಪಸ್ ಆದವರ ಸಂಪರ್ಕದಲ್ಲಿ ಇದ್ದವರಿಗೂ ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ.
Advertisement
ಬೆಂಗಳೂರಿನಲ್ಲಿ ಎಲ್ಲಿ ಎಷ್ಟು ಮಂದಿ ಇದ್ದಾರೆ?
– ಪೂರ್ವ ವಲಯ – 48
– ಮಹದೇವಪುರ – 40
– ಬೊಮ್ಮನಹಳ್ಳಿ – 38
– ದಕ್ಷಿಣ ವಲಯ – 29
– ಪಶ್ಚಿಮ ವಲಯ – 27
– ಯಲಹಂಕ – 14
– ಆರ್ ಆರ್ ನಗರ – 13
– ದಾಸರಹಳ್ಳಿ – 02