ಬೆಂಗಳೂರು: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟ ಐಎಎಸ್ ಅಧಿಕಾರಿಯ ಸಾಧನೆಗೆ ಕುಟುಂಬದವರು ಅಭಿನಂದಿಸಿ ಭಾವುಕರಾಗಿದ್ದಾರೆ.
Advertisement
ಟೋಕಿಯೋದಲ್ಲಿ ನಡೆಯುತ್ತಿರೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಮತ್ತೊಂದು ಬೆಳ್ಳಿ ಪದಕ ಸಿಕ್ಕಿದೆ. ಈ ಬೆಳ್ಳಿ ಪದಕವನ್ನು ನಮ್ಮ ಕರ್ನಾಟಕದ ಹಾಸನ ಮೂಲದ ಸುಹಾಸ್ ಯತಿರಾಜ್ ತಂದುಕೊಟ್ಟಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಇದನ್ನೂ ಓದಿ: ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!
Advertisement
ಐಎಎಸ್ ಅಧಿಕಾರಿ!:ಸುಹಾಸ್ ಯತಿರಾಜ್ ಅವರು ಐಎಎಸ್ ಅಧಿಕಾರಿ ಕೂಡ ಆಗಿದ್ದಾರೆ. ನೋಯ್ಡಾದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಡಳಿತಾಧಿಕಾರಿಯಾಗಿ ಸುಹಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.
Advertisement
ಸುಹಾಸ್ ಪ್ಯಾರಾಲಿಂಪಿಕ್ಸ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದು, ಪ್ಯಾರಾಲಿಂಪಿಕ್ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ:ಮಾಜಿ ಸೈನಿಕನಿಗೆ ಅಪಮಾನ – ರಾಷ್ಟ್ರಧ್ವಜ ಹಿಡಿದು ಮಾಜಿ ಸೈನಿಕರಿಂದ ಟೋಲ್ ಗೆ ಮುತ್ತಿಗೆ
Advertisement
ಪುರುಷರ ಸಿಂಗಲ್ಸ್ ಎಸ್ಎಲ್ 4 ನಲ್ಲಿ 21-15, 21-15-21 ರಲ್ಲಿ ಅಗ್ರ ಶ್ರೇಯಾಂಕಿತ ಮತ್ತು ವಿಶ್ವ ಚಾಂಪಿಯನ್ ಫ್ರಾನ್ಸ್ನ ಲ್ಯೂಕಾಸ್ ಮಜೂರ್ ವಿರುದ್ಧ ಸೋತು ಬೆಳ್ಳಿ ಪದಕ ಪಡೆದಿದ್ದಾರೆ.
ಸುಹಾಸ್ ಬೆಳ್ಳಿ ಪದಕ ಪಡೆಯುತ್ತಿದ್ದಂತೆ ಅವರ ಕುಟುಂಬದವರಲ್ಲಿ ಸಂಭ್ರಮ ಮನೆ ಮಾಡಿತ್ತು. ಅಣ್ಣನ ಸಾಧನೆ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ತಮ್ಮ ಶರತ್ ಯತಿರಾಜ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಸುಹಾಸ್ ಯತಿರಾಜ್ ನಾದಿನಿ ಸಂಜನಾ ಕೂಡ ತಮ್ಮ ಭಾವನ ಸಾಧನೆಯನ್ನು ಹೊಗಳಿ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದರು. ಇದನ್ನೂ ಓದಿ:ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧೆಯನ್ನು ರಕ್ಷಿಸಿದ ಯುವಕರು