ಕೊಪ್ಪಳ: ಹಾಲು ಖರೀದಿಸುವ ಸಮಯದಲ್ಲಿ ಮದ್ಯ ಕೊಳ್ಳಲು ಯಾರು ಬರಲ್ಲ. ರಾಜ್ಯ ಸರ್ಕಾರ ಬಾರ್ ಗಳಿಗೆ ನೀಡಿರುವ ಸಮಯ ವ್ಯಾಪಾರಕ್ಕೆ ಸೂಕ್ತವಲ್ಲ ಎಂದು ಮದ್ಯದಂಗಡಿಗಳ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರ ನೀಡಿರುವ ಸಮಯದಲ್ಲಿ ನಮಗೆ ವ್ಯಾಪಾರ ಸಹ ಆಗುತ್ತಿಲ್ಲ. ಸರ್ಕಾರಕ್ಕೆ ಆದಾಯವು ಬರಲ್ಲ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಬಾರ್ ಗಳನ್ನು ಬಂದ್ ಮಾಡಿದ್ರೆ ಉತ್ತಮ ಎಂದು ಕೊಪ್ಪಳ ಬಾರ್ ಮಾಲೀಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಮದ್ಯ ಮಾರಾಟಗಾರರು, ಸರ್ಕಾರ ಸಂಪೂರ್ಣವಾಗಿ ಬಾರ್ ಗಳನ್ನು ಬಂದ್ ಮಾಡುವುದು ಉತ್ತಮ. ಇದರಿಂದಾಗಿ ಜನರ ಆರೋಗ್ಯದ ಜೊತೆಗೆ ನಮಗೆ ನಷ್ಟವಾಗುದು ತಪ್ಪುತ್ತದೆ ಎಂದು ಹೇಳಿದ್ದಾರೆ.
ಬೆಳ್ಳಗೆ 6 ರಿಂದ 10ರವರೆಗೆ ಹಾಲು ಖರೀದಿ ಮಾಡುತ್ತಾರೆ. ವಿನಃ ಮದ್ಯ ಖರೀದಿ ಮಾಡುವುದಿಲ್ಲ. ಇದು ಯಾರಿಗೂ ಉಪಯೋಗವಿಲ್ಲ. ಲಾಭ ನಷ್ಟ ನಂತರ, ಮೊದಲು ಆರೋಗ್ಯ ಮುಖ್ಯ. ಮೊದಲು ಕೊರೊನಾದಿಂದ ಮುಕ್ತವಾಗಲಿ. ಕೂಡಲೇ ಸರ್ಕಾರ ಬಾರ್ ಗಳನ್ನು ಸಂಪೂರ್ಣವಾಗಿ ಮುಚ್ಚಿದರು ನಮ್ಮ ಸಮ್ಮತಿ ಇದೆ. ಆದರೆ ನಮಗೆ ಹಾಕುವ ತೆರಿಗೆ, ಬಾಡಿಗೆಯಲ್ಲಿ ವಿನಾಯಿತಿ ನೀಡಬೇಕೆಂದು ಕೊಪ್ಪಳ ಬಾರ್ ಮಾಲೀಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.



