ದೈನಂದಿನ ಆಹಾರ ಕ್ರಮದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆ ಯಾರೂ ಬೇಕಾದರೂ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.
ತೂಕ ಇಳಿಸಿಕೊಳ್ಳಲು ವ್ಯಾಯಾಮ, ಜಿಮ್ ಹೀಗೆ ಕಸರತ್ತಿನ ಮೊರೆ ಹೋಗುವವರೇ ಹೆಚ್ಚು. ಕೆಲವೊಮ್ಮೆ ಊಟವನ್ನು ಬಿಟ್ಟು ಬಿಡುತ್ತಾರೆ. ಆದರೆ ಇದೊಂದು ತಪ್ಪು ಕಲ್ಪನೆ. ದೇಹದ ತೂಕವನ್ನು ಇಳಿಸಲು ಊಟ ಬಿಡುವ ಬದಲು ಹಿತಮಿತವಾಗಿ ಸೇವಿಸುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.
Advertisement
Advertisement
ತೂಕ ಇಳಿಸಿಕೊಳ್ಳಲು ಇಚ್ಛಿಸುವವರಿಗೆ ಬೆಳಗ್ಗಿನ ಉಪಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಂಜಾನೆಯಿಂದ ಬೆಳಗ್ಗಿನ ಆಹಾರವನ್ನು ಬಿಟ್ಟು ಬಿಡುವುದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಬೆಳಗ್ಗೆ ನೀವು ಸೇವಿಸುವ ಆಹಾರ ನಮ್ಮ ಆರೋಗ್ಯಕ್ಕೆ ಹೊಂದಿಕೊಳ್ಳುತ್ತದೆಯಾ ಎಂದು ತಿಳಿದು ಸೇವನೆ ಮಾಡಬೇಕು. ಕಡಿಮೆ ಕ್ಯಾಲರಿ ಇರುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು.
Advertisement
ಬೆಳಗ್ಗಿನ ಉಪಾಹಾರ: ರಕ್ತದೊತ್ತಡದ ಸಮಸ್ಯೆ ಇಲ್ಲದಿದ್ದರೆ ಬೆಳಗ್ಗಿನ ಉಪಾಹಾರದಲ್ಲಿ ನೆನೆಸಿದ ಬಾದಾಮಿ ಮತ್ತು 1 ಕಪ್ ಕಾಫಿಯೊಂದಿಗೆ ಆರಂಭಿಸಿ. ಅದರೊಂದಿಗೆ ಒಂದು ಪ್ಲೇಟ್ ಉಪ್ಪಿಟ್ಟು ಸೇವಿಸಿ. ಅಥವಾ 2 ಬೇಯಿಸಿದ ಮೊಟ್ಟೆಗಳೊಂದಿಗೆ ಟೋಸ್ಟ್ ತಿನ್ನಬಹುದು. ಬೆಳಗ್ಗಿನ ಉಪಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವನೆ ಮಾಡಬೇಕು.
Advertisement
ನೀರು: ರಾತ್ರಿಯಲ್ಲಿ ಹಲವು ಗಂಟೆಗಳ ಕಾಲ ಮಲಗಿರುತ್ತೀರಿ. ಹೀಗಾಗಿ ದೇಹದಲ್ಲಿನ ನೀರು ಹೀರಲ್ಪಟ್ಟಿರುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ರಾತ್ರಿಯ ನೀರಿನ ಕೊರತೆ ನಿವಾರಣೆಯಾಗುತ್ತದೆ. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಗೆ ನೀರು ಕುಡಿಯಬೇಕು. ಪ್ರತಿನಿತ್ಯ ಬೇರೆ ಆಹಾರ ದೇಹಕ್ಕೆ ಹೋಗುವ ಮೊದಲು 2 ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯುವ ಮೂಲಕವಾಗಿ ದಿನವನ್ನು ಆರಂಭಿಸಿ. ದೇಹದ ಹೆಚ್ಚುವರಿ ಕೊಬ್ಬನ್ನು ಸಹ ಸುಲಭವಾಗಿ ಕಡಿಮೆ ಮಾಡಬಹುದು.
ನೀರನ್ನು ಹಾಗೆಯೇ ಕುಡಿಯಬಹುದು ಅಥವಾ ನಿಂಬೆ ರಸ, ಜೇನುತುಪ್ಪವನ್ನು ಸೇರಿಸಿ ಕುಡಿಯಬಹುದಾಗಿದೆ. ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ. ಚರ್ಮದ ಸಮಸ್ಯೆ, ಜೀರ್ಣಾಂಗ ಶುದ್ಧೀಕರಣ, ಜೀರ್ಣಕ್ರಿಯೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆ ನೀರಿನ ಸೇವನೆಯಿಂದ ನಿವಾರಣೆಯಾಗುತ್ತದೆ.
ಆಹಾರ ಸೇವನೆ: ತೂಕ ಇಳಿಸುವ ವಿಚಾರಕ್ಕೆ ಬಂದಾಗ ಬೆಳಗ್ಗೆ ಯಾವ ಆಹಾರವನ್ನು ಸೇವಿಸುತ್ತೇನೆ ಎಂಬುದು ಮುಖ್ಯವಾಗಿರುತ್ತದೆ. ಕಳೆದ ರಾತ್ರಿ ನೀವು ಸೇವಿಸಿದ ಆಹಾರದ ಶಕ್ತಿ ಖಾಲಿಯಾಗಿರುತ್ತದೆ. ಇದು ನಿಮ್ಮ ಜೀರ್ಣಕ್ರೀಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ದೇಹಕ್ಕೆ ಶಕ್ತಿ ತುಂಬಲು ಬೆಳಗ್ಗೆ ಅಲ್ಪ ಪ್ರಮಾಣದಲ್ಲಿ ಉಪಹಾರ ಸೇವನೆ ಮಾಡಬೇಕು.
ಕ್ಯಾಲೊರಿ: ಡಯಟ್ ಅಂದ ತಕ್ಷಣ ಮೊದಲು ನಮ್ಮ ಮನಸ್ಸಿಗೆ ಬರುವುದು ಕ್ಯಾಲೊರಿ. ಜಾಸ್ತಿ ಕ್ಯಾಲೊರಿ ಇರುವ ಪದಾರ್ಥಗಳನ್ನು ತಿಂದ್ರೆ ದಪ್ಪಾ ಆಗುತ್ತೇವೆ ಎನ್ನುವ ಆತಂಕ ಇರುತ್ತದೆ. ಹೆಚ್ಚಿನ ಕೊಬ್ಬಿನಾಂಶ ಇರುವ ಮತ್ತು ಸಕ್ಕರೆ ಅಂಶ ಇರುವ ಆಹಾರವನ್ನು ಮಿತವಾಗಿ ಸೇವನೆ ಮಾಡಿ. ಶೇ 25-30 ರಷ್ಟು ಮಾತ್ರ ಕ್ಯಾಲೊರಿಯನ್ನು ಒಳಗೊಂಡಿರುವ ಆಹಾರದ ಸೇವನೆಯನ್ನು ಮಾಡುವುದು ಉತ್ತಮವಾಗಿದೆ. ತುಪ್ಪ, ಬಾಳೆಹಣ್ಣು, ಮೊಟ್ಟೆ, ಮೋಸರನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು.
ಪ್ರೋಟಿನ್: ಬೆಳಗ್ಗಿನ ಉಪಹಾರದಲ್ಲಿ ಪ್ರೋಟೀನ್ ಭರಿತ ಆಹಾರವನ್ನು ಸೇವನೆ ಮಾಡಬೇಕು. ಮೊಟ್ಟೆ, ಮೊಸರು, ಧಾನ್ಯ ಹೀಗೆ ಪ್ರೋಟೀನ್ ಅಂಶ ಹೊಂದಿರುವ ಬೀಜಗಳು ಬೆಳಗ್ಗಿನ ಉಪಹಾರದಲ್ಲಿರ ಬೇಕು. ತರಕಾರಿ ಅತೀ ಹೆಚ್ಚು ಪ್ರೋಟೀನ್ ಅಂಶ ಹೊಂದಿರುವುದರಿಂದ ಬೇಯಿಸಿ ಅಥವಾ ಹಸಿಯಾಗಿ ಬೆಳಗ್ಗೆ ಉಪಹಾರದಲ್ಲಿ ಸೇವಿಸಬಹುದಾಗಿದೆ.
ಫೈಬರ್: ತರಕಾರಿ, ಹಣ್ಣು ಮತ್ತು ನಾರಿನಾಂಶ ಇರುವ ಪದಾರ್ಥಗಳ ಸೇವನೆಯಿಂದ ಕಡಿಮೆ ಕ್ಯಾಲೊರಿ ದೇಹದಲ್ಲಿ ಉಂಟಾಗುತ್ತದೆ. ಬೆಳಗ್ಗಿನ ಉಪಹಾರದಲ್ಲಿ ಕನಿಷ್ಟ 8 ಗ್ರಾಂ ಫೈಬರ್ ಇರುವ ಆಹಾರದ ಸೇವನೆ ಇಂದ ಕರುಳಿನಲ್ಲಿ ಕರಗಬಲ್ಲ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿಮಾಡುತ್ತದೆ. ಹಸಿವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆ ಉತ್ತಮವಾಗುವುದರ ಜೊತೆಗೆ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಯೋಗಾಸನ: ದೇಹದ ತೂಕ ಇಳಿಸಲು ಹೊರಗೆ ವಾಕಿಂಗ್ ಹೋಗಲು, ಜಿಮ್ ಗೆ ಹೋಗಲು, ವ್ಯಾಯಾಮ ಮಾಡಲು ಸಮಯವಿಲ್ಲ ಎನ್ನುವವರು ಮನೆಯಲ್ಲೇ ಪ್ರತಿನಿತ್ಯ 20 ನಿಮಿಷ ಬೆಳಗ್ಗೆ ಯೋಗಾಸನ ಮಾಡುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.
ತೂಕ ಇಳಿಸಿಕೊಳ್ಳಲು ಪ್ರತಿಯೊಬ್ಬರು ಯೋಜನೆಯನ್ನು ರೂಪಿಸುತ್ತಾರೆ. ಆದರೆ ಅದನ್ನು ಫಾಲೋ ಮಾಡುವಷ್ಟು ಸಮಯ, ತಾಳ್ಮೆ ಇರುವುದಿಲ್ಲ. ನಾವು ರೂಢಿಸಿಕೊಂಡಿರುವ ಆಹಾರ ಕ್ರಮ ನಮ್ಮ ದೇಹದ ಆಕಾರವನ್ನು ಹದಗೆಡಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗಾಗಿ ಈ ಮೇಲಿನ ಆಹಾರ ಕ್ರಮವನ್ನು ಫಾಲೋಮಾಡಿ ಸದೃಢ ದೇಹವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.