– ಭಯಾನಕ ವೀಡಿಯೋ ಸಿಸಿಟಿವಿಯಲ್ಲಿ ಸೆರೆ
– 9 ಪ್ರವಾಸಿಗರ ಸಾವು, ಮೂವರು ಗಂಭೀರ
ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲು ಭೂಕುಸಿತದ ಬಳಿಕ ಕಲ್ಲುಗಳ ಮಳೆಯಾಗಿದೆ. ಬೃಹತ್ ಕಲ್ಲು ಬಿದ್ದು ಬಸ್ಪಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಎರಡು ತುಂಡಾಗಿದೆ.
ಈ ದುರ್ಘಟನೆಯಲ್ಲಿ ಒಟ್ಟು 9 ಪ್ರವಾಸಿಗರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ನಾಲ್ಕು ರಾಜಸ್ಥಾನದವರು ಮತ್ತು ಇಬ್ಬರು ಛತ್ತೀಸಗಡ, ಮಹಾರಾಷ್ಟ್ರ ಮತ್ತು ಪಶ್ಚಿಮ ದೆಹಲಿಯ ತಲಾ ಒಬ್ಬರು ಎಂದು ಗುರುತಿಸಲಾಗಿದೆ. ಮತ್ತೋರ್ವ ಪ್ರವಾಸಿಗನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೃತರೆಲ್ಲರೂ ಹೆಚ್ಆರ್ 55 ಎಜಿ 9003 ನಂಬರ್ ಟೆಂಪೋದಲ್ಲಿ ಛಿತ್ಕುಲ್ ದಿಂದ ಸಾಂಗ್ಲಾದತ್ತ ಹೊರಟಿದ್ದರು.
Advertisement
Advertisement
ಬೃಹತ್ ಕಲ್ಲು ಬಿದ್ದಾಗ ಟೆಂಪೋ ಸೇತುವೆ ಮೇಲಿಂದ ನದಿಯನ್ನು ದಾಟುತ್ತಿತ್ತು. ಬೃಹತ್ ಕಲ್ಲು ಬೀಳುತ್ತಿದ್ದಂತೆ ಟೆಂಪೋ ಸಹ ನದಿಗೆ ಬಿದ್ದಿದೆ. ನದಿಗೆ ಟೆಂಪೋ ಬೀಳುತ್ತಿದ್ದಂತೆ ಪ್ರವಾಸಿಗರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಜನರ ಕಿರುಚಾಟ ಕೇಳಿ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ರಕ್ಷಣೆಗೆ ಮುಂದಾಗಿ, ಕೆಲವರನ್ನು ನದಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
#WATCH | Himachal Pradesh: Boulders roll downhill due to landslide in Kinnaur district resulting in bridge collapse; vehicles damaged pic.twitter.com/AfBvRgSxn0
— ANI (@ANI) July 25, 2021
Advertisement
ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ಮೃತ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ನೀಡುವದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಬೆಟ್ಟದ ಮೇಲಿಂದ ಬೃಹತ್ ಬಂಡೆ ಸೇತುವೆ ಮೇಳೆ ಭಯಾನಕ ದೃಶ್ಯ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರಣಮಳೆಗೆ ಈವರೆಗೂ 9 ಬಲಿ, ಮೂವರು ನಾಪತ್ತೆ – 11 ಜಿಲ್ಲೆಗಳಲ್ಲಿ ಜಲ ಕಂಟಕ
किन्नौर के बटसेरी में पहाड़ी दरकने से हुआ हादसा हृदयविदारक है।
इसकी चपेट में आया पर्यटकों से सवार वाहन जिसमें 9 की मृत्यु व 2 घायल तथा 1 अन्य राहगीर के घायल होने की खबर अत्यंत दुखद है।
ईश्वर दिवंगत आत्माओं को शांति तथा शोकग्रस्त परिवार को संबल प्रदान करें। pic.twitter.com/MqesANNlV0
— Jairam Thakur (@jairamthakurbjp) July 25, 2021