– 6 ಮಂದಿ ವಿರುದ್ಧ ಎಫ್ಐಆರ್ ದಾಖಲು
– ಸಿಬಿಐನಿಂದ ತನಿಖೆ ಆರಂಭ
ಬೆಂಗಳೂರು: ಕೇರಳ ಚಿನ್ನ ಸ್ಮಗ್ಲಿಂಗ್ಗೆ ದಾವೂದ್ ಲಿಂಕ್ ಇದೆ ಎಂಬ ಸ್ಫೋಟಕ ವಿಚಾರ ತನಿಖೆಯ ವೇಳೆ ಬಯಲಾಗುತ್ತಿದ್ದಂತೆ ಇತ್ತ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಚಿನ್ನವೇ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಲಾಗಿದ್ದ 2.5 ಕೆಜಿ ಚಿನ್ನ ನಾಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
Advertisement
Advertisement
Advertisement
ಕಸ್ಟಮ್ಸ್ ಇಲಾಖೆಯ ಜಂಟಿ ಆಯ್ತುಕ ಎಂ. ಜೆ. ಚೇತನ್ ನೀಡಿದ ದೂರಿನ ಮೇರೆಗೆ ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಇಲಾಖೆಯ ಸಹಾಯಕ ಆಯುಕ್ತ ವಿನೋದ್ ಚಿನ್ನಪ್ಪ ಮತ್ತು ಕೇಶವ್, ಸೂಪರಿಟೆಂಡೆಂಟ್ ಎನ್. ಜಿ ರವಿಶೇಖರ್, ಡಿನ್ರೆಕ್ಸ್, ಕೆಬಿ ಲಿಂಗರಾಜು ಮತ್ತು ಖಾಸಗಿ ವ್ಯಕ್ತಿ ಎಸ್.ಟಿ ಹಿರೇಮಠ್ ವಿರುದ್ಧ ಎಫ್ಐರ್ ದಾಖಲಾಗಿದೆ. ಇದನ್ನೂ ಓದಿ: ಚಿನ್ನ ಸ್ಮಗ್ಲಿಂಗ್ ಕೇಸ್ – ಮಗಳಿಂದಾಗಿ ಬೆಂಗಳೂರಿನಲ್ಲಿ ಅಡಗಿದ್ದ ಸ್ವಪ್ನ ಸುರೇಶ್ ಅರೆಸ್ಟ್
Advertisement
ಏನಿದು ಪ್ರಕರಣ?
ಕಳ್ಳ ಸಾಗಾಣೆಯ ಮೂಲಕ ದೇಶಕ್ಕೆ ಚಿನ್ನ ಮಾರಾಟ ಮಾಡುವ ಹಲವು ಪ್ರಯತ್ನಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸುತ್ತಲೇ ಇರುತ್ತಾರೆ. ಇದೇ ರೀತಿ 2012 ರಿದ 14ರವರೆಗೆ 13 ಪ್ರಕರಣದ ಅಡಿ 2 ಕೆಜೆ 594 ಗ್ರಾಂ ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು.
ಈ ವೇಳೆ ಸಿಕ್ಕಿ ಬಿದ್ದ ಚಿನ್ನಗಳನ್ನು ವಿಮಾನ ನಿಲ್ದಾಣದ ಕಾರ್ಗೋ ಗೋದಾಮಿನಲ್ಲಿ ಇಡಲಾಗಿತ್ತು. ಆದರೆ ಈಗ ಇಡಲಾಗಿದ್ದ ಚಿನ್ನ ನಾಪತ್ತೆಯಾಗಿದೆ. ಪತ್ತೆಯಾದ ಚಿನ್ನದ ಬಗ್ಗೆ ಹೈದರಾಬಾದಿನ ವಿಚಕ್ಷಣ ದಳ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ವಿಚಕ್ಷಣ ದಳದ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಚೇತನ್ ಅವರು ದೂರು ನೀಡಿದ್ದು ಅ. 12 ರಂದು ಎಫ್ಐಆರ್ ದಾಖಲಾಗಿದ್ದು, ಸಿಬಿಐ ತನಿಖೆ ಆರಂಭವಾಗಿದೆ.