ಬೆಂಗಳೂರು: ಲಾಕ್ಡೌನ್ ಮಾಡಲ್ಲ ಎಂದು ಹೇಳಿಕೊಂಡು ಬಂದಿದ್ದ ಯಡಿಯೂರಪ್ಪನವರ ಸರ್ಕಾರ ಇಂದು ರಾತ್ರಿ 8 ಗಂಟೆಗೆ ದಿಢೀರ್ ಘೋಷಣೆಯನ್ನು ಪ್ರಕಟಿಸಿತು. ಒಂದು ವಾರಗಳ ಕಾಲ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.
Advertisement
ಲಾಕ್ಡೌನ್ಗೆ ಈ ಮೊದ್ಲು ಮೀನಾಮೇಷ ಎಣಿಸಿದ್ದ ಸರ್ಕಾರ ದಿಢೀರ್ ತನ್ನ ನಿರ್ಧಾರ ಬದಲಾಯಿಸಿದೆ. ಸರ್ಕಾರದ ಲಾಕ್ಡೌನ್ ನಿರ್ಧಾರದ ಹಿಂದೆ ಕೊರೊನಾ ತಜ್ಞರು ನೀಡಿದ ಪಂಚ ಕಾರಣಗಳಿವೆ.
1. ಬೆಂಗಳೂರಿನಲ್ಲಿ ಹೀಗೆ ಬಿಟ್ಟರೆ ನಿತ್ಯ 2,000 ಕೇಸ್ ಸ್ಫೋಟಗೊಳ್ಳುವ ಭಯ. ಆರ್ಥಿಕತೆ ಲೆಕ್ಕ ಹಾಕಿದ್ರೇ ಬೆಂಗಳೂರು ಸುಧಾರಿಸಲು ಸಾಕಷ್ಟು ಟೈಂ ಬೇಕು.
2. ಬೆಂಗಳೂರಿನಿಂದ ಹಳ್ಳಿಗಳಿಗೆ ಜನ ವಲಸೆ ಹೋಗೋದು ಹೆಚ್ಚಾಗುತ್ತಿದೆ. ಇನ್ನೊಂದು ವಾರ ಇದೇ ರೀತಿ ಬೆಂಗಳೂರಿಂದ ಹಳ್ಳಿಗಳಿಗೆ ಜನ ಹೋದ್ರೆ ಮಹಾ ಸ್ಫೋಟದ ಆತಂಕ ಹೆಚ್ಚಾಗಿತ್ತು. ವಲಸೆಯನ್ನು ತಡೆಯೋಕೆ ಲಾಕ್ಡೌನ್ ಅನಿವಾರ್ಯವಾಗಿತ್ತು. ಹೀಗಾಗಿಯೇ ವೀಕೆಂಡ್ ಲಾಕ್ಡೌನ್ ಜಾರಿಯಾದ ಹೊತ್ತಲ್ಲಿ ವಾರದ ಲಾಕ್ಡೌನ್ ಘೋಷಣೆಯಾಗಿದೆ.
Advertisement
Advertisement
3. ಆಂಟಿಜೆನ್ ಕಿಟ್ನಿಂದ ಟೆಸ್ಟ್ ಹೆಚ್ಚಲಿದೆ. ಬೆಂಗಳೂರಲ್ಲಿ ಸಮುದಾಯಕ್ಕೆ ಸೋಂಕು ಹಬ್ಬಿರೋ ಬಗ್ಗೆ ಅಸಲಿ ಚಿತ್ರಣ ಸಿಗುತ್ತದೆ. ಈಗ ಲಾಕ್ಡೌನ್ ಮಾಡೋದ್ರಿಂದ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಬಹುದು.
4. ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಹೈರಾಣಾಗಿದ್ದು, ಅವರಿಗೂ ಸೋಂಕು ಹಬ್ಬಿದೆ. ಲ್ಯಾಬ್ ಟೆಕ್ನಿಷಿಯನ್ಸ್ ಸೋಂಕಿತರಾಗಿದ್ದಾರೆ. ಈ ಒತ್ತಡದಲ್ಲಿ ಬೆಂಗಳೂರಿನಲ್ಲಿ 2 ಸಾವಿರ ಕೇಸ್ ಬಂದ್ರೆ ನಿಭಾಯಿಸೋದು ಕಷ್ಟ
Advertisement
5. ಕಂಟೈನ್ಮೆಂಟ್ ಝೋನ್ಗಳಲ್ಲಿ ಟೈಟ್ ರೂಲ್ಸ್ ಗೆ ನಮಲ್ಲಿ ಖಾಕಿಗಳ ಕೊರತೆ ಇದೆ. ಹೀಗಾಗಿ ಕೇವಲ ಕಠಿಣ ರೂಲ್ಸ್ ವರ್ಕೌಟ್ ಆಗಲ್ಲ. ಫುಲ್ ಲಾಕ್ಡೌನ್ ಅನಿವಾರ್ಯ ಎಂಬವುದು ಸರ್ಕಾರದ ಗಮನಕ್ಕೆ ಬಂದಿದೆ.
ಮಂಗಳವಾರದಿಂದ ಅಂದ್ರೆ ಜುಲೈ 14ರಿಂದ ರಾತ್ರಿ 8 ಗಂಟೆಯಿಂದ ಜುಲೈ 22ರ ನಸುಕಿನಜಾವ ಐದು ಗಂಟೆಯವರೆಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಲಾಕ್ಡೌನ್ ಆಗಲಿದೆ.