DistrictsKarnatakaLatestMain PostUdupiUncategorized

ಉಡುಪಿಯಲ್ಲಿ ನೀರುಪಾಲಾದ ಬೆಂಗಳೂರಿನ ಯುವಕರು

ಉಡುಪಿ: ಜಿಲ್ಲೆಯ ಕಾಪು ಬೀಚ್‍ಗೆ ಪ್ರವಾಸಕ್ಕೆಂದು ಬಂದ ಬೆಂಗಳೂರಿನ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.

ಬೆಂಗಳೂರಿನ ಹೇಸರಘಟ್ಟದಿಂದ ಐವರು ಯುವಕರ ತಂಡ ಉಡುಪಿ ಪ್ರವಾಸಕ್ಕೆ ಬಂದಿತ್ತು. ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿ ಸಾವನ್ನಪ್ಪಿದ್ದಾರೆ. ಸಂಜೆ ಕಾಪು ಬೀಚ್‍ನಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.

ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಾಮೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಮೇಲಕ್ಕೆ ತಂದು ಆಕ್ಸಿಜನ್ ನೀಡಲಾಯಿತಾದರೂ ಅಷ್ಟರಲ್ಲೇ ರೂಪೇಶ್ ಮೃತಪಟ್ಟಿದ್ದರು. ನಂತರ ಕಾರ್ತಿಕ್ ಕೂಡ ಸಿಕಿದ್ದು, ಆತನು ಮೃತಪಟ್ಟಿದ್ದಾನೆ. ಕಾಪು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.

Back to top button