ಬೆಂಗಳೂರು: ಸಿಲಿಕಾನ್ ಸಿಟಿ ಬಿಟ್ಟು ಹೋಗುವವರಿಗೆ ಇದೀಗ ಅಷ್ಟದಿಗ್ಬಂಧನ ಹೇರಲಾಗಿದೆ. ಈ ಟೈಟ್ ನಿಯಮಗಳನ್ನು ಸರ್ಕಾರ ಕ್ಯಾಬಿನೆಟ್ ಸಭೆಯ ಬಳಿಕ ತರುವ ಸಾಧ್ಯತೆಗಳಿವೆ. ಬೆಂಗಳೂರಿಂದ ತಮ್ಮ ಊರಿಗೆ ಈಗ ಹೋಗೋರಿಗೆ ತರುವ ರೂಲ್ಸ್ ಗಳ ಇನ್ ಸೈಡ್ ಡೀಟೆಲ್ಸ್ ಸ್ಟೋರಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೌದು. ಸಾವಿರಾರು ಮಂದಿ ಶನಿವಾರ, ಸೋಮವಾರದಿಂದ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಕೊರೊನಾ ಭಯ, ಬದುಕಿಗೆ ಬರೆ ಹಾಗೂ ಜೀವನ ಕುಂಟುವುದು ಖರೆ ಅಂತ ಜಾಗ ಖಾಲಿ ಮಾಡುತ್ತಿದ್ದಾರೆ.
Advertisement
Advertisement
ಬೆಂಗಳೂರಿಂದ ಹೋಗ್ತಿರುವವರ ಸಂಖ್ಯೆ ಹೆಚ್ಚಾಗ್ತಿರುವ ಬೆನ್ನಲ್ಲೇ ಸರ್ಕಾರಕ್ಕೆ ಫುಲ್ ಟೆನ್ಶನ್ ಶುರುವಾಗಿದೆ. ಬೆಂಗಳೂರಿಂದ ಹೋದವರಿಂದ ಹಳ್ಳಿಗಳಿಗೂ ಕೊರೊನಾ ಹಬ್ಬುವ ಆತಂಕ ಎದುರಾಗಿದೆ. ಹಾಗಾಗಿ ಬೆಂಗಳೂರಿಂದ ಹೋಗುವವರಿಗೆ ರೂಲ್ಸ್ ಜಾರಿಗೆ ತರಲು ಚರ್ಚೆ ನಡೆಯುತ್ತಿದೆ.
Advertisement
ನಾಳೆ ನಡೆಯುವ ಕ್ಯಾಬಿನೆಟ್ ನಲ್ಲೂ ಬೆಂಗಳೂರು ಬಿಟ್ಟು ಹೋಗುವವರ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಬೆಂಗಳೂರಿಂದ ಹೋಗುವವರಿಗೆ ಅಷ್ಟದಿಗ್ಬಂಧನ ಹಾಕುವ ಸಾಧ್ಯತೆ ಹೆಚ್ಚಾಗಿದ್ದು, ಈಗಾಗಲೇ ಸಿಎಂ ಯಡಿಯೂರಪ್ಪ ಅವರು ಏನೆಲ್ಲ ರೂಲ್ಸ್ ಗಳ ತರಬಹುದು ಎಂಬುದರ ಬಗ್ಗೆ ಗೃಹ ಸಚಿವ, ಗ್ರಾಮೀಣಾಭಿವೃದ್ಧಿ ಸಚಿವ, ನಗರಾಭಿವೃದ್ಧಿ ಸಚಿವರ ಬಳಿ ಪ್ಲಾನ್ ಕೇಳಿದ್ದಾರೆ.
Advertisement
ಅಷ್ಟದಿಗ್ಬಂಧನದ ಪ್ಲಾನ್ ಏನು..?
ತಮ್ಮ ತಮ್ಮ ಹಳ್ಳಿಗಳಿಗೆ ಹೋಗುವ ಮುನ್ನ ಎರಡು ದಿನ ಮೊದಲು ಕೋವಿಡ್ ಟೆಸ್ಟ್ ಮಾಡಿಸಿರಬೇಕು. ಒಂದು ವೇಳೆ ವರದಿ ನೆಗಟಿವ್ ಬಂದಿದ್ದರೆ ಮಾತ್ರ ಊರಿನ ಮನೆಯಲ್ಲಿ ಮೂರು ದಿನ ಕ್ವಾರಂಟೈನ್ ಆಗಬೇಕು. ಕುಟುಂಬದ ಒಬ್ಬ ವ್ಯಕ್ತಿಯ ವರದಿ ಪಾಸಿಟಿವ್ ಬಂದ್ರೂ ಆ ಕುಟುಂಬದ ಯಾರೊಬ್ಬರೂ ಬೇರೆ ಕಡೆ ಹೋಗುವಂತಿಲ್ಲ.
ಸ್ಥಳೀಯ ಗ್ರಾಮ ಪಂಚಾಯ್ತಿ ಪಿಡಿಓಗಳಿಗೆ, ಪಟ್ಟಣ ಪಂಚಾಯತ್ ಪುರಸಭೆ, ನಗರಸಭೆ, ಪಾಲಿಕೆ ವಾರ್ಡ್ ಅಧಿಕಾರಿಗಳಿಗೆ ಪರೀಕ್ಷೆಯ ಪ್ರಮಾಣ ಪತ್ರ ತೋರಿಸಬೇಕು. ಒಂದು ವೇಳೆ ಕೋವಿಡ್ ಟೆಸ್ಟ್ ಮಾಡಿಸದಿದ್ದರೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಬೇಕು.
ಬೆಂಗಳೂರಿಂದ ಹೋಗುವ ಪ್ರತಿಯೊಬ್ಬರು ಆಯಾ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಮಾಹಿತಿಯನ್ನ ಕಡ್ಡಾಯವಾಗಿ ಕೊಡಬೇಕು. ಬೆಂಗಳೂರಿನ ಗಡಿಗಳಲ್ಲಿ ಚೆಕ್ ಪೋಸ್ಟ್ ಕೂಡ ನಿರ್ಮಿಸಿ ಅಲ್ಲಿಯೂ ತಪಾಸಣೆ ನಡೆಸಬೇಕು. ಕೋವಿಡ್ ಟೆಸ್ಟ್ ಇಲ್ಲದವರ ಕೈಗೆ ಸ್ಟಾಂಪ್ ಹಾಕಿ ಗುರುತು ಮಾಡುವ ಬಗ್ಗೆಯೂ ರೂಲ್ಸ್ ತೆರು ಸಾಧ್ಯತೆಗಳು ದಟ್ಟವಾಗಿದೆ.