– ಚಿರತೆಗಾಗಿ ಶೋಧ ಕಾರ್ಯ ಮುಂದುವರಿಕೆ
– ವಾಕಿಂಗ್ಗೆ ತೆರಳದಂತೆ ಸೂಚನೆ
ಬೆಂಗಳೂರು: ಬೇಗೂರಿನ ಅಪಾರ್ಟ್ಮೆಂಟ್ ಬಳಿ ಪತ್ತೆಯಾದ ಚಿರತೆಗೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
15 ವರ್ಷದ ಆಸುಪಾಸಿನ ಚಿರತೆ ನಿನ್ನೆ ಬೆಳಿಗ್ಗೆ ಜಾವ ಹಾಗೂ ರಾತ್ರಿ ಪ್ರೆಸ್ಟೀಜ್ ಗ್ರೂಪ್ ಅಪಾರ್ಟ್ಮೆಂಟ್ ನಲ್ಲಿ ಕಾಣಿಸಿಕೊಂಡಿದೆ. ರಾತ್ರಿ 8.45 ಸಮಯದಲ್ಲಿ ಅಪಾರ್ಟ್ಮೆಂಟ್ ಒಳಗೆ ಬಂದ ಚಿರತೆ ಬೆಳಿಗ್ಗೆ ಬಂದ ದಾರಿಯಲ್ಲಿ ಮತ್ತೆ ವಾಪಸ್ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
Advertisement
ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದಾರೆ. ಚಿರತೆ ಬಂದು ಹೋಗಿರುವುದು ಅರಣ್ಯ ಅಧಿಕಾರಿಗಳಿಗೂ ಖಚಿತವಾಗಿದೆ. ರಾತ್ರಿ ಸ್ಥಳದಲ್ಲೇ ಇದ್ದು ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳಿಗೆ ಚಿರತೆ ಕಾಣಿಸಿಕೊಂಡಿಲ್ಲ.
Advertisement
Advertisement
ನೂರಾರು ಎಕರೆಗಳಷ್ಟು ಇರುವ ಬಡಾವಣೆಯಲ್ಲಿ ಚಿರತೆ ಹುಡುಕಾಟ ಕಷ್ಟವಾಗಿದೆ. ಆಹಾರ ಅರಸಿ ಬನ್ನೇರುಘಟ್ಟ ಅಭಯಾರಣ್ಯದಿಂದ ಬಂದಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಮುಂಜಾನೆ ಅಪಾರ್ಟ್ಮೆಂಟ್ ನ ಓಡಾಡಿದ್ದ ಚಿರತೆಯಿಂದಾಗಿ ಬೇಗೂರಿನ ಪ್ರೆಸ್ಟೀಜ್ ಗ್ರೂಪ್ ಅಪಾರ್ಟ್ಮೆಂಟ್ ನ ನಿವಾಸಿಗಳು ಭಯಗೊಂಡಿದ್ದಾರೆ.
ಗಾರ್ಡನ್ ಬಳಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಅಪಾರ್ಟ್ಮೆಂಟ್ ಕಾಂಪೌಂಡ್ ಗೋಡೆ ಹತ್ತಿ ಚಿರತೆ ಹೊರ ಹೋಗಿದೆ. ಒಂಭತ್ತು ಟವರ್ ಗಳಿರುವ ಅಪಾರ್ಟ್ಮೆಂಟ್ ನಲ್ಲಿ ಸಾವಿರಾರು ಜನ ವಾಸವಾಗಿದ್ದಾರೆ. ಅಪಾರ್ಟ್ಮೆಂಟ್ ಹೊರ ಬರದಂತೆ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಕೆಲ ದಿನ ಮುಂಜಾನೆ ವಾಕಿಂಗ್ ಹೋಗಬೇಡಿ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.