– ದೇಶದಲ್ಲಿ ಒಟ್ಟು 6 ಪ್ರಕರಣಗಳು ಪತ್ತೆ
ಬೆಂಗಳೂರು: ಬ್ರಿಟನ್ ಭೂತ ರಾಜ್ಯಕ್ಕೆ ಬಂದೇ ಬಿಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಮೂರು ಸೇರಿ ದೇಶದಲ್ಲಿ ಒಟ್ಟು ಆರು ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆಯಾಗಿದೆ.
ನಿಮಾನ್ಸ್ ಲ್ಯಾಬ್ ನಲ್ಲಿ 3 ಕೇಸ್ ದೃಢವಾಗಿದೆ. ಬ್ರಿಟನ್ ನಿಂದ ರಾಜ್ಯಕ್ಕೆ ಬಂದ ಮೂವರಲ್ಲಿ ಬ್ರಿಟನ್ ವೈರಸ್ ದೃಢವಾಗಿದ್ದು, ನಿಮ್ಹಾನ್ಸ್ ನ ವೈರಾಣು ಪ್ರಯೋಗಾಲಯದಲ್ಲಿ ಈ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ. ಹೀಗಾಗಿ ಆರೋಗ್ಯ ಇಲಾಖೆ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೆ ಜೆನೆಟಿಕ್ ಸೀಕ್ವನ್ಸ್ ಪರಿಕ್ಷೆ ಮಾಡಲಿದೆ. ಇದನ್ನೂ ಓದಿ: ಬ್ರಿಟನ್ ನಿಂದ ಬಂದ 428 ಮಂದಿ ಮೇಲೆ ನಿಗಾ
Advertisement
Advertisement
ಬ್ರಿಟನ್ ನಿಂದ ಹಿಂದಿರುಗಿದವರ ಪೈಕಿ ಮೂವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಹೀಗಾಗಿ ಒಬ್ಬರ ಸ್ಯಾಂಪಲ್ಸ್ ಅನ್ನು ನಿಮ್ಹಾನ್ಸ್ ಗೆ ಕಳುಹಿಸಲಾಗಿತ್ತು. ಈ ವೇಳೆ ಬ್ರಿಟನ್ ನಲ್ಲಿ ಪತ್ತೆಯಾಗಿದ್ದ ರೂಪಾಂತರಿ ಸೋಂಕು ಇರುವುದು ದೃಢವಾಗಿತ್ತು. ಇನ್ನು ಉಳಿದ ಇಬ್ಬರ ಸ್ಯಾಂಪಲ್ಸ್ ಅನ್ನು ಹೈದರಾಬಾದ್ ಗೆ ಕಳುಹಿಸಲಾಗಿತ್ತು. ಅಲ್ಲೂ ಇಬ್ಬರ ವದರಿಯಲ್ಲಿ ಪಾಸಿಟಿವ್ ಬಂದಿತ್ತು. ಇದನ್ನೂ ಓದಿ: ಕರುನಾಡಿಗೆ ಈಗ ಬ್ರಿಟನ್ ಕೊರೊನಾ ಭಯ
Advertisement
Advertisement
ಇನ್ನು ಸಿಲಿಕಾನ್ ಸಿಟಿಯಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾದ ಬಗ್ಗೆ ಆರೋಗ್ಯಾಧಿಕಾರಿಗಳು, ನಮಗೆ ರಾಜ್ಯ ಸರ್ಕಾರದಿಂದ ಮಾಹಿತಿ ಬರಬೇಕು. ಅಧಿಕೃತವಾಗದೇ ನಾವು ಹೇಳೋಕೆ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬ್ರಿಟನ್ ವೈರಸ್ ಕನ್ಫರ್ಮ್ ಆಗಿದ್ದು, ಮುಂದೆ ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ.
ಸರ್ಕಾರಕ್ಕೆ ಸವಾಲುಗಳೇನು..?
* ಬ್ರಿಟನ್ ವೈರಸ್ ಕನ್ಫರ್ಮ್ ಆದರೆ ಮತ್ತೆ 12 ಪ್ರಬೇಧ ವೈರಸ್ ಗಳನ್ನ ಪತ್ತೆ ಹಚ್ಚಬೇಕು
* 2127 ಜನರನ್ನ ಮತ್ತೆ ಟೆಸ್ಟ್ ಗೆ ಒಳಪಡಿಸುವುದು
* 2127 ಜನರಲ್ಲಿ ಪಾಸಿಟಿವ್ ಬಂದ ಅಷ್ಟು ಜನರ ಸ್ವಾಬ್ ಅನ್ನು ಜೆನೆಟಿಕ್ ಪರೀಕ್ಷೆಗೆ ಒಳಪಡಿಸುವುದು
* ಜೆನೆಟಿಕ್ ಪರೀಕ್ಷೆಯಲ್ಲಿ ಹೊಸ ವೈರಸ್ ಅಂತಾ ಪತ್ತೆಯಾದ್ರೆ ಪಾಸಿಟಿವ್ ಬಂದ ಏರಿಯಾ ಸೀಲ್ ಡೌನ್ ಮಾಡಬೇಕು
* ಬ್ರಿಟನ್ ವೈರಸ್ ಕನ್ಫರ್ಮ್ ಆದರೆ ಪಾಸಿಟಿವ್ ಬಂದವರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ವ್ಯಕ್ತಿಗಳ ಅತಿ ಬೇಗ ಟ್ರೇಸ್ ಔಟ್ ಮಾಡಬೇಕು
* ಪ್ರತಿಯೊಬ್ಬರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಬೇಕು
* ಸ್ವಯಂಕೃತ ವಾಗಿ ಟೆಸ್ಟ್ ಗೆ ಒಳಪಡಿಸಿ ಅಂತ ಘೋಷಣೆ ಮಾಡೋದು
* ಮಾರ್ಕೆಟ್ ಗಳಲ್ಲಿ ಟಫ್ ರೂಲ್ಸ್ ಜಾರಿ ಮಾಡೋದು
* ಪ್ರತಿ ಜಿಲ್ಲೆಯಲ್ಲಿ ಪಾಸಿಟಿವ್ ಬಂದ ಪ್ಲೇಸ್ ನಲ್ಲಿ ಟೆಸ್ಟಿಂಗ್ ಹೆಚ್ಚಳ ಮಾಡಬೇಕು