ಕೋಲ್ಕತ್ತಾ: 13ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 9 ಜನ ಸಾವನ್ನಪ್ಪಿರುವ ಘಟನೆ ಕೋಲ್ಕತ್ತಾದ ಸ್ಟ್ಯಾಂಡ್ ರಸ್ತೆಯಲ್ಲಿ ನಡೆದಿದೆ. ಈ ಅವಘಡ ಕುರಿತಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿ ಪರಿಹಾರ ಘೋಷಿಸಿದ್ದಾರೆ.
Saddened by the loss of lives due to the fire tragedy in Kolkata. In this hour of sadness, my thoughts are with the bereaved families. May the injured recover at the earliest.
— Narendra Modi (@narendramodi) March 9, 2021
Advertisement
ಕೋಲ್ಕತ್ತಾದಲ್ಲಿ ಸಂಭವಿಸಿರುವ ದುರಂತದಿಂದ ಪ್ರಾಣಹಾನಿ ಉಂಟಾಗಿರುವುದು ನೋವು ತಂದಿದೆ. ಈ ದುಃಖದ ಸಮಯದಲ್ಲಿ ಮೃತದ ಕುಟುಂಬಸ್ಥರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಗಾಯಾಳುಗಳು ಬೇಗನೆ ಗುಣಮುಖರಾಗಲೇಂದು ಹಾರೈಸುತ್ತೇನೆ. ಈ ಬೆಂಕಿ ದುರಂತದಿಂದ ಪ್ರಾಣ ಕಳೆದುಕೊಂಡವರ ರಕ್ತಸಂಬಂಧಿಗಳಿಗೆ ಪಿಎಂಎನ್ಆರ್ಎಫ್ನಿಂದ ತಲಾ 2 ಲಕ್ಷ ರೂ. ರೂ. ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಕೊಡುತ್ತೇವೆ ಎಂದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
Advertisement
PM @narendramodi has approved an ex-gratia of Rs. 2 lakh each from PMNRF for the next of kin of those who have lost their lives due to the tragic fire in Kolkata. Rs. 50,000 would be given to those seriously injured.
— PMO India (@PMOIndia) March 9, 2021
Advertisement
ನಿನ್ನೆ ಸಂಜೆ ನೈ ಕೊಹಿಲಾ ಘಾಟ್ ಬಳಿ ಕಟ್ಟಡವೊಂದರ 13 ನೇ ಅಂತಸ್ತಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣವೇ ಸ್ಥಳಕ್ಕೆ 25 ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸುವ ಕಾರ್ಯವನ್ನು ಸಿಬ್ಬಂದಿ ಮಾಡುತ್ತಿದ್ದರು. 5 ಜನ ಅಗ್ನಿಶಾಮದಳ ಸಿಬ್ಬಂದಿ, ಒಬ್ಬ ಪೊಲೀಸ್ ಎಎಸ್ಐ, ಒಬ್ಬ ರೇಲ್ವೆ ಅಧಿಕಾರಿ ಹಾಗೂ ಸೆಕ್ಯೂರಿಟಿ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಎಂಟು ಜನ ಕಾಣಿಸುತ್ತಿಲ್ಲ. ಬೆಂಕಿ ನಿಯಂತ್ರಣಕ್ಕೆ ತರಲಾಗಿದ್ದು, ಕಾಣೆಯಾದವರ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
Advertisement
West Bengal: Fire breaks out on the 13th floor of a multi- storey building at Strand road in Kolkata. 8 fire tenders reach the spot. More details awaited pic.twitter.com/DLzrmBZDkF
— ANI (@ANI) March 8, 2021
ಘಟನಾ ಸ್ಥಳಕ್ಕೆ ಸಿಎಂ ಮಮತಾ ಬ್ಯಾನರ್ಜಿ ಭೇಟಿ ನೀಡಿದ ಪೊಲೀಸ್ ಕಮೀಷನರ್ ಅವರಿಂದ ಮಾಹಿತಿ ಪಡೆದುಕೊಂಡು, ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಮತ್ತು ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ಉದ್ಯೋಗ ಸಹ ನೀಡಲಾಗುವುದು ಎಂದು ಘೋಷಿಸಿದರು.