ಪಾಟ್ನಾ: ಬಿಹಾರ ವಿಧನಾಸಭಾ ಫಲಿತಾಂಶ ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದು, ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗುವ ಲಕ್ಷಣಗಳು ದಟ್ಟವಾಗುತ್ತಿವೆ. ಚುನಾವಣಾ ಆಯೋಗ ಸಹ ಮಧ್ಯರಾತ್ರಿಯವರೆಗೂ ಮತ ಎಣಿಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. ಸದ್ಯ ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ಡಿಎ 124, ಮಹಾಘಟಬಂಧನ್ 111, ಎಲ್ಜೆಪಿ 1 ಮತ್ತು ಇತರರರು 7ರಲ್ಲಿ ಮುನ್ನಡೆಯಲ್ಲಿವೆ.
Advertisement
ಬೆಳಗ್ಗೆ 9 ಗಂಟೆವರೆಗೂ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಭಾರೀ ಮುನ್ನಡೆ ಕಾಯ್ದುಕೊಂಡಿತ್ತು. 10 ಗಂಟೆಯ ನಂತರ ಬಿಹಾರದ ಸ್ವರೂಪವೇ ಬದಲಾಯ್ತು. ಗೆಲುವಿನ ಸಂಭ್ರಮ ನಿತೀಶ್ ಕುಮಾರ್ ಪಾಳಯದಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ಎನ್ಡಿಎ ಮೈತ್ರಿಕೂಟ 120 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಮ್ಯಾಜಿಕ್ ನಂಬರ್ ತಲುಪಿ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಇಲ್ಲಿದ್ದ ಸಂಭ್ರಮ ಲಕ್ಷ್ಮಿ ತೇಜಸ್ವಿ ನಿವಾಸ ಸೇರಿದಂತೆ ಆಗಿತ್ತು. ಜೆಡಿಯು ಜೊತೆ ಮೈತ್ರಿ ಮಾಡಿಕೊಂಡರೂ ಬಿಜೆಪಿ ಬಿಹಾರದಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವಲ್ಲಿ ಯಶಸ್ವಿಯಾಗಿದೆ.
Advertisement
Advertisement
ಸಂಜೆ ಸುಮಾರು 6.30ಕ್ಕೆ ಮತ್ತೊಮ್ಮೆ ವಿಜಯ ಲಕ್ಷಿ ತನ್ನ ಪಥವನ್ನ ಬದಲಿಸಿದ್ದರಿಂದ ಅಭ್ಯರ್ಥಿಗಳ ಢವ ಢವ ಹೆಚ್ಚಾಯ್ತು. ಎನ್ಡಿಎ ಮತ್ತು ಮಹಾಘಟಬಂಧನ್ ನಡುವೆ ನಾನಾ ನೀನಾ ಅನ್ನೋ ರೀತಿಯಲ್ಲಿ ಫೈಟ್ ಶುರುವಾಯ್ತು. ಸಂಜೆ ಏಳು ಗಂಟೆಗೆ ಎನ್ಡಿಎ 132 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಮತ್ತೆ ಕೆಳಗಿಳಿಯಿತು.
Advertisement
ಕಾಂಗ್ರೆಸ್ ಮತ್ತು ಆರ್ ಜೆಡಿ ರಾತ್ರಿ 10 ಗಂಟೆಗೆ ಚುನಾವಣೆ ಆಯೋಗದ ಮುಂದೆ ಹೋಗಿದ್ದು, ನಿತೀಶ್ ಕುಮಾರ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ನಿತೀಶ್ ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಬೈಟಕ್ ನಡೆಯುತ್ತಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿವೆ. ಮತ್ತೊಂದು ಕಡೆ ಆರ್ ಜೆಡಿ 119 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದರು ಚನಾವಣೆ ಆಯೋಗ ಘೋಷಣೆ ಮಾಡುತ್ತಿಲ್ಲ ಎಂದು ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದೆ.
ಶೇಕಡಾವಾರು ಮತ ಗಳಿಕೆಯಲ್ಲಿ ಎನ್ಡಿಎ ಮೈತ್ರಿಕೂಟವೇ ಮುಂದಿದೆ. ಎನ್ಡಿಎ ಶೇಕಡಾ 34ರಷ್ಟು ಮತ ಪಡೆದ್ರೆ, ಎಂಜಿಬಿ ಶೇಕಡಾ 32ರಷ್ಟು ಮತ ಪಡೆದಿದೆ. ಎಲ್ಜೆಪಿ ಶೇಕಡಾ 5.65ರಷ್ಟು ಮತ ಪಡೆದಿದೆ. ಆರ್ಜೆಡಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಂಐಎಂ ಶೇಕಡಾ 1.24ರಷ್ಟು ಮತ ಪಡೆದ್ದಿದೂ, ಅಲ್ಲದೇ ಐದು ಸ್ಥಾನ ಗೆದ್ದು ಮಹಾಘಟಬಂಧನ್ಗೆ ಶಾಕ್ ನೀಡಿದೆ. ಒಂದ್ವೇಳೆ ಎನ್ಡಿಎಗೆ ಸಿಂಪಲ್ ಮೆಜಾರಿಟಿ ಬಂದ್ರೂ. ನಿತೀಶ್ ಮತ್ತೆ ಸಿಎಂ ಆಗ್ತಾರೋ ಇಲ್ವೋ ಎಂಬ ಚರ್ಚೆಗಳು ಶುರುವಾಗಿವೆ. ಚುನಾವಣಾ ಪ್ರಚಾರದ ವೇಳೆ ಮೋದಿ ಕೊಟ್ಟ ಮಾತಿನಂತೆ ನಿತೀಶರನ್ನು ಸಿಎಂ ಮಾಡ್ತಾರಾ ಎಂಬ ಕುತೂಹಲವೂ ಎಲ್ಲರಲ್ಲಿದೆ. ಇನ್ನು ಬಿಜೆಪಿ ಅಧಿಕಾರದ ಸನಿಹದಲ್ಲಿರುವುದಕ್ಕೆ ಹೈಕಮಾಂಡ್ ಹರ್ಷ ವ್ಯಕ್ತಪಡಿಸಿದೆ.